ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

oplus_0
oplus_0
Published on

ಬೀದರ್: ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಮನ್ನಾಖೇಳ್ಳಿ ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಖೈರೊದ್ದೀನ್ ಅವರು ಅನೇಕ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಸೇರಿದ ಮುಖಂಡರನ್ನು ನಗರದಲ್ಲಿ ಗುರುವಾರ ಮಾಜಿ ಶಾಸಕ ಅಶೋಕ ಖೇಣಿ ಅವರು ಪಕ್ಷದ ಧ್ವಜ ಹಾಕಿ ಬರಮಾಡಿಕೊಂಡರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಚಂದ್ರಶೇಖರ ಚನ್ನಶೆಟ್ಟಿ, ಅಲ್ಪಸಂಖ್ಯಾತರ ರಾಜ್ಯ ಘಟಕದ ಕಾರ್ಯದರ್ಶಿ ಸೈಯದ್ ಸಮಿಯೊದ್ದೀನ್, ಮುಖಂಡರಾದ ಬಸವರಾಜ ಭತಮುರ್ಗೆ, ರಾಜಕುಮಾರ ತರಿ, ರಾಜಕುಮಾರ ಮಡಕಿ, ಸಾಜೀದ್ ಪಾಶಾ, ವಿಜಯಕುಮಾರ ವಿಜಾಪೂರೆ, ಉದಯಕುಮಾರ ಚಟನಳ್ಳಿ, ಶರಣು ಸಿದ್ಧಾ ಸೇರಿ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net