ಯುವ ಹಿಂದು ಸೇನಾದಿಂದ ಮೆರವಣಿಗೆ

Oplus_0
Oplus_0
Published on

ಬೀದರ್: ರಾಮನವಮಿ ನಿಮಿತ್ತ ಶ್ರೀರಾಮ ಸೇನೆ ವತಿಯಿಂದ ನಗರದಲ್ಲಿ ಅಲಂಕೃತ ವಾಹನದಲ್ಲಿ ಶ್ರೀರಾಮ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಜೆಸ್ಕಾಂ ಕಚೇರಿ ಸಮೀಪದ ಹನುಮಾನ ಮಂದಿರ ಹತ್ತಿರ ಶುರುವಾದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಹಾಯ್ದು ಓಲ್ಡ್ ಸಿಟಿಯ ರಾಮ ಮಂದಿರ ತಲುಪಿ ಮುಕ್ತಾಯಗೊಂಡಿತು. ಮೆರವಣಿಗೆ ಉದ್ದಕ್ಕೂ ಸೇನೆ ಕಾರ್ಯಕರ್ತರು ಹಾಗೂ ಯುವಕರು ಜೈಶ್ರೀರಾಮ ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು. ಸಂಗೀತದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆಗೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಈಶ್ವರಸಿಂಗ್ ಠಾಕೂರ್, ಕಾಶೀನಾಥ ಬೆಲ್ದಾಳೆ, ಸೋಮನಾಥ ಪಾಟೀಲ್ ಗಾದಗಿ, ಸದಾನಂದ ಜೋಶಿ, ದೀಪಕ ವಾಲಿ, ವೀರಶೆಟ್ಟಿ ಖ್ಯಾಮಾ, ಶಶಿಧರ ಹೊಸಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net