ಮಾಜಿ ಶಾಸಕ ಪಾಂಡೆ ಇನ್ನಿಲ್ಲ

Ramesh Pande - Copy
Published on

ಬೀದರ್: ಮಾಜಿ ಶಾಸಕ ರಮೇಶಕುಮಾರ ಪಾಂಡೆ (90) ಬುಧವಾರ ನಗರದಲ್ಲಿ ನಿಧನ ಹೊಂದಿದರು.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಂಡೆ ಅವರು ಇಲ್ಲಿನ ದೇವಿ ಕಾಲನಿಯಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಗುರುವಾರ ಬೆಳಗ್ಗೆ 11ಕ್ಕೆ ಗುರುದ್ವಾರ ಸಮೀಪದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮೂಲತಃ ಜನವಾಡ ನಿವಾಸಿಯಾದ ಪಾಂಡೆ ಅವರು ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸಿದರು. 1990ರಲ್ಲಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿ, ಅಧ್ಯಕ್ಷರಾಗಿ ಸಹ ಕೆಲಸ ಮಾಡಿದರು. 1998ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋತರು. 1999ರಲ್ಲಿ ಬೀದರ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ, ಅಟಲ್ ಬಿಹಾರ ವಾಜಪೇಯಿ ಹವಾದಲ್ಲಿ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಬಂಡೆಪ್ಪ ಖಾಶೆಂಪುರ ವಿರುದ್ಧ ಪಾಂಡೆ ಅವರು 2090 ಮತಗಳ ಅಂತರದಿಂದ ಗೆದ್ದರು. ಈ ವೇಳೆ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ವಿಶೇಷ.
2004ರಲ್ಲಿ ಚುನಾವಣೆಯಿಂದ ದೂರ ಸರಿದರು. ಮತ್ತೆ 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತರು. ಆ ನಂತರ ರಾಜಕೀಯದಿಂದ ದೂರ ಸರಿದರು. ಆರ್.ಆರ್.ಕೆ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net