

ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಡಾ.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿ, ಬಾಬಾ ಸಾಹೇಬರ ಶ್ರಮದಿಂದ ದೇಶದಲ್ಲಿ ಅತ್ಯಂತ ಉತ್ತಮ ಸಂವಿಧಾನ ರಚನೆಯಾಗಿದೆ. ಕಾನೂನು ಅಧ್ಯಯನದಲ್ಲಿ ಸಂವಿಧಾನ ವಿಷಯ ಪ್ರಮುಖವಾಗಿದ್ದು, ಅದರಂತೆ ನಾವೆಲ್ಲರೂ ನಡೆಯುವುದರ ಜತೆಗೆ ಪಾಲನೆ ಮಾಡಬೇಕು ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲ ಜನಾಂಗದವರಿಗೆ ನ್ಯಾಯ ಒದಗಿಸಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನದಿಂದಲೇ ದೇಶದ ಸಾಮಾನ್ಯ ಪ್ರಜೆಯೂ ಪ್ರಧಾನಿಯಾಗಬಹುದು. ಈ ಅವಕಾಶವನ್ನು ನಮ್ಮ ಸಂವಿಧಾನ ಒದಗಿಸಿದೆ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಸೂರ್ಯ-ಚಂದ್ರ ಇರುವವರೆಗೂ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ಎಲ್ಲ ಜಾತಿ, ಧರ್ಮ, ಪರಂಪರೆಗಳಿಗೆ ನ್ಯಾಯಕೊಡುವ ವಿಶ್ವದ ಏಕೈಕ ಸಂವಿಧಾನ ನಮ್ಮದು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ರಕ್ಷಣೆ ಇದೆ, ಸಮಾನ ಅವಕಾಶಗಳಿವೆ ಎಂದು ಹೇಳಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಜಯಕುಮಾರ ಕಾಂಗೆ, ಅರಹಂತ ಸಾವಳೆ, ರಾಜಶೇಖರ ನಾಗಮೂರ್ತಿ, ಈಶ್ವರಸಿಂಗ್ ಠಾಕೂರ್, ಪೀರಪ್ಪ ಯರನಳ್ಳಿ, ಕಿರಣ ಪಾಟೀಲ್, ಮಾಧವರಾವ ಹುಸೂರೆ, ಬಸವರಾಜ ಆರ್ಯ, ಶಶಿ ಹೊಸಳ್ಳಿ, ರಾಜೇಂದ್ರ ಪೂಜಾರಿ, ಗಜೇಂದ್ರ ಕನಕಟಕರ್, ರಾಜಕುಮಾರ ಪಾಟೀಲ್, ಲುಂಬಿಣಿ ಗೌತಮ, ಯೋಗೇಶ್ವರಿ, ಸೋನ್ ಕಾಂಬ್ಳೆ, ಮಹಾನಂದಾ ಪಾಟೀಲ್, ಸರಸ್ವತಿ ಹೇಮಶೆಟ್ಟಿ, ಶೋಭಾ ತೆಲಂಗ, ರೂಪವತಿ ಜಾಧವ್, ಗಣೇಶ ಭೋಸ್ಲೆ, ಸುಭಾಷ ಮಡಿವಾಳ, ಗುರುನಾಥ ಜಾಂತಿಕರ್, ರಾಜರಡ್ಡಿ ಶಾಬಾದೆ, ರಾಮಶೆಟ್ಟಿ ಪನ್ನಾಳೆ, ಅಶೋಕ ಹೊಕ್ರಾಣೆ, ಅರವಿಂದ ಮುತ್ಯಾ, ವೀರಣ್ಣ ಕಾರಬಾರಿ, ಪ್ರಭಾಕರ ನಾಗರಾಳೆ, ಬಾಬುರಾವ ಕಾರಬಾರಿ, ಅನೀಲ ಭೂಸಾರೆ, ಶಿವರಾಜ ಗಂದಗೆ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ಶ್ರೀನಿವಾಸ ಚೌಧರಿ ಇತರರಿದ್ದರು.