ಗುನ್ನಳ್ಳಿಯಲ್ಲಿ ಜಾತ್ರೋತ್ಸವ 17ರಿಂದ

gunnallli
Published on

ಬೀದರ್: ಗುನ್ನಳ್ಳಿಯಲ್ಲಿ ಶ್ರೀ ವೀರಭದ್ರೇಶ್ವರ 11ನೇ ಜಾತ್ರಾ ಮಹೋತ್ಸವ ನಿಮಿತ್ತ ಏ.17ರಿಂದ 20ರವರೆಗೆ ವಿವಿಧ ಅಧ್ಯಾತ್ಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
17ರಂದು ಸಂಜೆ 6ಕ್ಕೆ ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರ ಭವ್ಯ ಮೆರವಣಿಗೆ, ರಾತ್ರಿ 8ಕ್ಕೆ ಧರ್ಮಸಭೆ ಇದೆ. 18ರಂದು ಬೆಳಗ್ಗೆ 8ಕ್ಕೆ ಜಗದ್ಗುರುಗಳಿಂದ ಇಷ್ಟಲಿಂಗ ಪೂಜೆ, ಮಧ್ಯಾಹ್ನ 12.30ಕ್ಕೆ ಆಶೀರ್ವಚನ, ಸಂಜೆ 6ಕ್ಕೆ ಅಕ್ಕಮಹಾದೇವಿ ಮಹಿಳಾ ಮಂಡಲದಿಂದ ಕೋಲಾಟ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
20ರಂದು ಬೆಳಗ್ಗೆ 5ಕ್ಕೆ ಶ್ರೀ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬೆಳಗ್ಗೆ 6ಕ್ಕೆ ಪಲ್ಲಕ್ಕಿ ಮೆರವಣಿಗೆ, 7ಕ್ಕೆ ಅಗ್ನಿಕುಂಡ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಪ್ರಸಾದ, ರಾತ್ರಿ 8ಕ್ಕೆ ಗ್ರಾಮಸ್ಥರಿಂದ ಭಜನೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯಬೇಕು ಎಂದು ದೇವಸ್ಥಾನ ಮಂಡಳಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net