ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿ

Kherda Math
Published on

ಬಸವಕಲ್ಯಾಣ: ತಾಲೂಕಿನ ಖೇರ್ಡಾ (ಬಿ) (ಖೇಳಗಿ) ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಸಕ್ತ ವರ್ಷ ಅದ್ದೂರಿ ಆಚರಣೆ ನಿರ್ಧರಿಸಲಾಗಿದೆ.
ಜಾತ್ರೆ ನಿಮಿತ್ತ ಇತ್ತೀಚೆಗೆ ಶ್ರೀಮಠದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಮಠದ ಪೀಠಾಧಿಪತಿ ಶ್ರೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ಶ್ರೀ ಶಿವಲಿಂಗೇಶ್ವರ ಜಾತ್ರೆ ಅದ್ದೂರಿ, ಅರ್ಥಪೂರ್ಣವಾಗಿ ಮಾಡೋಣ. ಜಾತ್ರೆ ನಿಮಿತ್ತ ಗುರುವಾರ ಅಧ್ಯಾತ್ಮ ಪ್ರವಚನಕ್ಕೆ ಚಾಲನೆ ನೀಡಿದ್ದು, ಏ.21 ರವರೆಗೆ ನಿತ್ಯವೂ ರಾತ್ರಿ 7ಕ್ಕೆ ಧಾರವಾಡದ ಶ್ರೀ ಶಿವಬಸವ ದೇವರು ಪ್ರವಚನ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಪಲ್ಲಕ್ಕಿ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಏ.21ರಂದು ಬೆಳಗ್ಗೆ 8ಕ್ಕೆ ಗದ್ದಿಗೆಗೆ ರುದ್ರಾಭಿಷೇಕ, ಸಂಜೆ 4ಕ್ಕೆ ಕಳಸಾರೋಹಣ, ರಾತ್ರಿ 9ಕ್ಕೆ ಗ್ರಾಮದಲ್ಲಿ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಏ.22ರಂದು ಸಂಜೆ 4ಕ್ಕೆ ಪಲ್ಲಕ್ಕಿ ಮತ್ತು ನಂದಿಕೋಲ ಮೆರವಣಿಗೆ, ಸಂಜೆ 6 ಗಂಟೆಗೆ ರಥೋತ್ಸವ ನಡೆಯಲಿದ್ದು, ನಂತರ ಧರ್ಮಸಭೆ ಇದೆ. ರಾತ್ರಿ 10ಕ್ಕೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net