

ಬೀದರ್: ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಇಲ್ಲಿಯ ಗುಂಪಾ ರಸ್ತೆಯಲ್ಲಿ ಇರುವ ರಿಲಯನ್ಸ್ ಟ್ರೆಂಡ್ಸ್ ಕೆಳಗಡೆ ಇರುವ ಮಹಾಲಕ್ಷ್ಮಿ ಕಾಂಪ್ಲೆಕ್ಸ್‍ನ ನಾಟ್ಯಶ್ರೀ ಸಾಂಸ್ಕೃತಿಕ ಭವನದಲ್ಲಿ ಏಪ್ರಿಲ್ 7 ರಂದು ಸಂಜೆ 5ಕ್ಕೆ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಚಿಂತಕಿ ಡಾ. ನೀತಾ ಬೆಲ್ದಾಳೆ ಉದ್ಘಾಟಿಸುವರು. ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಅತಿಥಿಗಳಾಗಿ ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕ ಮುನೇಶ್ವರ ಲಾಖಾ, ಸಿವಿಲ್ ಎಂಜಿನಿಯರ್ ಹಾವಶೆಟ್ಟಿ ಪಾಟೀಲ, ಚಿಂತಕಿ ಶೀಲಾ ಪಾಟೀಲ ಗಾದಗಿ, ಸಾಹಿತಿ ಡಾ. ಲೀಲಾವತಿ ನಿಂಬೂರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪಾಲ್ಗೊಳ್ಳುವರು.
ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಡುಪಿಯ ಉಪನ್ಯಾಸಕಿ ಅಕ್ಷಯಾ ಗೋಖಲೆ ಅವರು, ಅವಿಭಕ್ತ ಕುಟುಂಬದ ಲಾಭಗಳು, ಸಂಸ್ಕಾರಯುತ ಶಿಕ್ಷಣದ ಅಗತ್ಯತೆ, ವೃದ್ಧ ಪಾಲಕರನ್ನು ಸಲಹುವ ಮಕ್ಕಳ ಜವಾಬ್ದಾರಿ ಕುರಿತು ಉಪನ್ಯಾಸ ನೀಡಲಿದ್ದಾರೆ.
ಅಮೃತಾ ಶೆಟ್ಟಿ ಹಾಗೂ ತಂಡದವರು ಶಾಸ್ತ್ರೀಯ ಸಂಗೀತ, ಮಹೇಶಕುಮಾರ ಮತ್ತು ತಂಡ ಜಾನಪದ ಗೀತೆ, ರಶ್ಮಿ, ಶ್ವೇತಾ ಹಾಗೂ ತಂಡ ಭರತನಾಟ್ಯ, ನಿತ್ಯ ಮತ್ತು ತಂಡ ಸಮೂಹ ನೃತ್ಯ, ರಾಜೇಶ್ವರಿ ಹಾಗೂ ತಂಡ ಜಾನಪದ ನೃತ್ಯ, ಪೂರ್ವಿಕ ಮತ್ತು ತಂಡದವರು ನೃತ್ಯ ರೂಪಕ ನಡೆಸಿಕೊಡುವರು.
ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಕೋರಿದ್ದಾರೆ.