ಮರಾಠ ಮುಖಂಡರ ಸಭೆ ಏ.5ರಂದು

Deepak Patil
Published on

ಬೀದರ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿಯ ಗುರುದ್ವಾರ ಸಮೀಪದ ಎಸ್.ಆರ್.ಎಸ್. ಫಂಕ್ಷನ್ ಹಾಲ್‍ನಲ್ಲಿ ಏಪ್ರಿಲ್ 5 ರಂದು ಮಧ್ಯಾಹ್ನ 2ಕ್ಕೆ ಜಿಲ್ಲೆಯ ಬಿಜೆಪಿ ಬೆಂಬಲಿತ ಮರಾಠ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಮರಾಠ ಸಮಾಜದ ಯುವ ಮುಖಂಡ ದೀಪಕ ಪಾಟೀಲ ಚಾಂದೋರಿ ತಿಳಿಸಿದ್ದಾರೆ.
ಸಭೆಯಲ್ಲಿ ಬೀದರ್ ಲೋಕಸಭೆ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆದ ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಮಾಜಿ ಶಾಸಕ ಮಾರುತಿರಾವ್ ಮುಳೆ, ಮರಾಠ ಮಹಾ ಸಂಘದ ಅಧ್ಯಕ್ಷ ದಿಗಂಬರರಾವ್ ಮಾನಕಾರಿ, ಮರಾಠ ಸಮಾಜದ ಮುಖಂಡರಾದ ಬಾಬುರಾವ್ ಕಾರಬಾರಿ, ದಿಗಂಬರರಾವ್ ಪಾಟೀಲ ಚಾಂದೋರಿ, ವೆಂಕಟೇಶರಾವ್ ಮಾಯಿಂದೆ, ನಾರಾಯಣರಾವ್ ಪಾಟೀಲ ಭಂಡಾರಕುಮಟಾ, ರಮೇಶ ಪಾಟೀಲ ದಾಬಕಾ, ಅಶೋಕ ಪಾಟೀಲ ಹೊಕ್ರಾಣ, ಓಂಪ್ರಕಾಶ ಪಾಟೀಲ ಗಂಗನಬೀಡ್, ಸಂಜೀವ್ ಪಾಟೀಲ ಹಿಪ್ಪಳಗಾಂವ್, ರಾಮ ಕದಂ ಹೊಳಸಮುದ್ರ, ಭಾನುದಾಸ ಬಿರಾದಾರ, ಸತೀಶ್ ವಾಸರೆ, ಗೋವಿಂದರಾವ್ ಪಾಟೀಲ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಬಿಜೆಪಿ ಬೆಂಬಲಿತ ಮರಾಠ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net