ಚಿಮ್ಮೆಗಾಂವ್‍ನಲ್ಲಿ ಪ್ರಕಾಶ ಘಾಳೆಗೆ ನಾಗರಿಕ ಸನ್ಮಾನ

Prakash Ghale Sanman At Chimmegaon Photo-1
Published on

ಬೀದರ್: ಕಾಂಗ್ರೆಸ್ ಕಿಸಾನ್, ಖೇತ್ ಮಜ್ದೂರ್ ವಿಭಾಗದ ರಾಷ್ಟ್ರೀಯ ಸಂಯೋಜಕ ಹಾಗೂ ಮಹಾರಾಷ್ಟ್ರ ಉಸ್ತುವಾರಿಯಾಗಿ ನೇಮಕಗೊಂಡ ಪ್ರಕಾಶ ಘಾಳೆ ಅವರನ್ನು ಸ್ವಗ್ರಾಮ ಕಮಲನಗರ ತಾಲ್ಲೂಕಿನ ಚಿಮ್ಮೆಗಾಂವ್‍ನಲ್ಲಿ ಗ್ರಾಮಸ್ಥರ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಪ್ರಕಾಶ ಘಾಳೆ ಹಾಗೂ ಮಹಾದೇವಿ ಘಾಳೆ ದಂಪತಿಗೆ ಶಾಲು ಹೊದಿಸಿ, ಬೃಹತ್ ಹೂ ಮಾಲೆ ಹಾಕಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಗ್ರಾಮದವರೇ ಆದ ಪ್ರಕಾಶ ಘಾಳೆ ಅವರಿಗೆ ಪ್ರಮುಖ ರಾಜಕೀಯ ಪಕ್ಷದ ರಾಷ್ಟ್ರಮಟ್ಟದ ಹುದ್ದೆ ದೊರೆತಿರುವುದು ಗ್ರಾಮಸ್ಥರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಪ್ರಮುಖರು ತಿಳಿಸಿದರು.
ಘಾಳೆ ಅವರು ಬಾಲ್ಯದಿಂದಲೇ ನಾಯಕತ್ವ ಗುಣ ಹೊಂದಿದ್ದಾರೆ. ಜನ ಹಿತದ ಕಾರ್ಯಗಳ ಕಾರಣ ಅವರಿಗೆ ವಿವಿಧ ಉನ್ನತ ಹುದ್ದೆಗಳು ಒಲಿದು ಬಂದಿವೆ ಎಂದು ಹೇಳಿದರು.
ಗ್ರಾಮಸ್ಥರ ಪ್ರೋತ್ಸಾಹ ಹಾಗೂ ಬೆಂಬಲದಿಂದಾಗಿಯೇ ನಾನು ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಗ್ರಾಮದ ಜನರ ಸಹಕಾರವನ್ನು ಎಂದೆಂದೂ ಮರೆಯಲಾರೆ ಎಂದು ಪ್ರಕಾಶ ಘಾಳೆ ನುಡಿದರು.
ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಅದರ ಫಲವಾಗಿ ಪಕ್ಷ ಪ್ರಮುಖವಾದ ಜವಾಬ್ದಾರಿಗಳನ್ನು ನೀಡುತ್ತ ಬಂದಿದೆ. ಇದೀಗ ಕಿಸಾನ್, ಖೇತ್ ಮಜ್ದೂರ್ ವಿಭಾಗದ ರಾಷ್ಟ್ರೀಯ ಸಂಯೋಜಕ ಹಾಗೂ ಮಹಾರಾಷ್ಟ್ರ ಉಸ್ತುವಾರಿಯ ಗುರುತವಾದ ಹೊಣೆಗಾರಿಕೆಯನ್ನು ನೀಡಿದೆ ಎಂದು ತಿಳಿಸಿದರು.
ಪಕ್ಷ ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಹುಸಿಗೊಳಿಸಲಾರೆ. ಪಕ್ಷ ಹಾಗೂ ಜನರ ಹಿತಕ್ಕೆ ಅನುಗುಣವಾಗಿ ಕೆಲಸ ಮಾಡುವೆ ಎಂದು ಹೇಳಿದರು.
ಪಂಢರಿನಾಥ ಮಹಾರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್ ಬಿರಾದಾರ, ಉಪಾಧ್ಯಕ್ಷ ತುಕಾರಾಮ ಪಾಟೀಲ ಮಾತನಾಡಿದರು. ಪ್ರಮುಖರಾದ ಸಂಜಯ್ ಪಾಟೀಲ, ಶ್ರೀರಂಗ ಮುಳೆ, ಧನರಾಜ ಬಿರಾದಾರ, ಸಾವಿತ್ರಿಬಾಯಿ ಪಾಟೀಲ, ಮೈನೊದ್ದಿನ್ ಸಾಬ್, ಉರ್ಮಿಳಾ ಪಾಟೀಲ, ಎಸ್.ಬಿ. ಪಾಟೀಲ, ದಿಲೀಪ್ ಪಾಟೀಲ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net