

ಬೀದರ್: ಜಿಲ್ಲಾ ಉಪ್ಪಾರ (ಸಗರ) ಸಮಾಜ ಸಂಘದ ನೂತನ ಅಧ್ಯಕ್ಷರಾಗಿ ತಾನಾಜಿ ಸಗರ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದಲ್ಲಿ ನಡೆದ ಸಂಘದ ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಸರ್ವ ಸಮ್ಮತಿಯಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಾಬುರಾವ್ ಕೊಳ್ಳೂರ ಅವರನ್ನು ಆಯ್ಕೆ ಮಾಡಲಾಯಿತು. ವಿವಿಧ ಪದಾಧಿಕಾರಿ ಹಾಗೂ ಕಾರ್ಯಕಾರಿಣಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಂಘದ ಮಾಜಿ ಅಧ್ಯಕ್ಷ ಶಿವಾಜಿರಾವ್ ಸಗರ್ ಭಾತಂಬ್ರಾ, ಪ್ರಮುಖರಾದ ಮಾಣಿಕಪ್ಪ ಮಂಠಾಳ, ಹಣಮಂತರಾವ್ ಲಾದೇಕ್, ಬಸವರಾಜ ಬೆಳ್ಳೂರ, ರವಿ ಬನ್ನಾಳೆ, ಮನೋಹರ ಉಪ್ಪಾರ, ಅನಿಲ್ ಉಪ್ಪಾರ, ಗುಂಡಪ್ಪ ಚಿಂತಾಕಿ, ನಾಮದೇವ, ದೇವಿದಾಸ ಮತ್ತಿತರರು ಇದ್ದರು.