ಸಸ್ಯಶ್ರೀ ಕಂಪನಿಗೆ ರಾಷ್ಟ್ರೀಯ ಪ್ರಶಸ್ತಿ

Sasyashree Company Award Photo
Published on

ಬೀದರ್: ಇಲ್ಲಿಯ ಸಸ್ಯಶ್ರೀ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗೆ ಅಲೆಕ್ಸ್ ಫೌಂಡೇಷನ್‍ನ 2023ನೇ ಸಾಲಿನ ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೆಷನ್(ಎಫ್‍ಪಿಒ) ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ನವದೆಹಲಿಯ ಲೆ ಮೆರಿಡಿಯನ್ ಹೊಟೇಲ್‍ನಲ್ಲಿ ನಡೆದ ಜೀವನೋಪಾಯಗಳ ಭಾರತ ಶೃಂಗಸಭೆಯಲ್ಲಿ ಸ್ಪೇನ್ ರಾಜ ಮನೆತನದ ಇನ್ಫ್ಯಾಂಟ್ ಡೋನಾ ಕ್ರಿಸ್ಟಿನಾ ಹಾಗೂ ಕೇಂದ್ರದ ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಫೈಜ್ ಅಹಮ್ಮದ್ ಕಿದ್ವಾಯಿ ಅವರು ಕಂಪನಿಯ ಅಧ್ಯಕ್ಷ ಜಗನ್ನಾಥ ಕರಂಜೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿಯು ಕಂಪನಿಯ ಐದು ವರ್ಷಗಳ ರೈತ ಪರ ಕಾರ್ಯ ಚಟುವಟಿಕೆಗಳಿಗೆ ಸಂದ ಗೌರವವಾಗಿದೆ ಎಂದು ಕರಂಜೆ ತಿಳಿಸಿದರು.
ಕಂಪನಿಯ ನಿರ್ದೇಶಕ ರಾಜಶೇಖರ ನಾಗಮೂರ್ತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣಕುಮಾರ ಸಿ. ಲದ್ದೆಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net