ಜಿಲ್ಲಾ ಮಟ್ಟದ ಅಬಾಕಸ್ ಸ್ಪರ್ಧೆ

abacus
Published on

ಬೀದರ್: ಜಿನಿಯಸ್ ಅಬಾಕಸ್ ಸೆಂಟರ್ ವತಿಯಿಂದ ಇಲ್ಲಿಯ ಹನುಮಾನ ನಗರದ ಕುದರೆ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ಮಟ್ಟದ ಅಬಾಕಸ್ ಸ್ಪರ್ಧೆ ನಡೆಯಿತು.
ಜಿಲ್ಲೆಯ ೧ ರಿಂದ ಏಳನೇ ತರಗತಿ ವರೆಗಿನ ೬೦೦ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ತರಗತಿ ಹಾಗೂ ಹಂತವಾರು ೧೨೦ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸ್ಪರ್ಧೆಗಳು ಸಹಕಾರಿ: ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಸ್ಪರ್ಧೆಗಳು ಸಹಕಾರಿಯಾಗಲಿವೆ ಎಂದು ಸ್ಪರ್ಧೆಯನ್ನು ಉದ್ಘಾಟಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಹೇಳಿದರು.
ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಜಿನಿಯಸ್ ಅಬಾಕಸ್ ಸೆಂಟರ್ ಮುಖ್ಯಸ್ಥ ಪ್ರವೀಣ ಸ್ವಾಮಿ ತಿಳಿಸಿದರು.
ಹುಮನಾಬಾದ್‌ನ ಗಂಗಾಧರ ಸ್ವಾಮೀಜಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್, ಪ್ರಮುಖರಾದ ಶಂಭುಲಿAಗ ಕುದರೆ, ಅಶ್ವಿನಿ ಕುದರೆ, ವಿ. ಜ್ಞಾನಗಾಂಧಿ, ಬಸವರಾಜ ಉಮ್ರಾಣಿ, ಶಿವಲಿಂಗಯ್ಯ ಸ್ವಾಮಿ, ಮುಕ್ತಾಂಜಲಿ ಜಿ. ಹಿರೇಮಠ, ಸೆಂಟರ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net