ಕಂಚಿನ ಪದಕ ಜಯಿಸಿದ ಬೀದರ್ ವಿದ್ಯಾರ್ಥಿನಿ

National Level Achievement Govt First Grade Womens College Bidar Student Sanman
Published on

ಬೀದರ್: ಸೆಮಿಸ್ಟರ್‍ನ ಅಮೃತಸರದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪೆಂಕಾಕ್ ಸಿಲಾತ್ ಸ್ಪರ್ಧೆಯಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸಂಜನಾ ರಾಮದಾಸ್ ಕಂಚಿನ ಪದಕ ಜಯಿಸಿ ಸಾಧನೆಗೈದಿದ್ದಾರೆ.
ಬಿ.ಕಾಂ. ಐದನೇ ಸೆಮಿಸ್ಟರ್‍ನಲ್ಲಿ ಓದುತ್ತಿರುವ ಸಂಜನಾ 85-90 ಕೆ.ಜಿ. ಟೆಂಡಿಂಗ್ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಭಾಜನರಾದರು. ಕಾಲೇಜಿನ ಬಿ.ಕಾಂ ಐದನೇ ಸೆಮಿಸ್ಟರ್‍ನ ಮತ್ತೊಬ್ಬರು ವಿದ್ಯಾರ್ಥಿನಿ ಸ್ವಾತಿ ಪಾಂಡಪ್ಪ ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಸನ್ಮಾನ: ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿಗೆ ಬುಧವಾರ ಕಾಲೇಜಿನಲ್ಲಿ ಸ್ವಾಗತಿಸಿ ಬರಮಾಡಿಕೊಂಡು, ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಜಕುಮಾರ ಕುಲಕರ್ಣಿ, ಪೆಂಕಾಕ್ ಸಿಲಾತ್ ತರಬೇತುದಾರ ಸಿದ್ಧಾರ್ಥ ಮೋರೆ, ವ್ಯವಸ್ಥಾಪಕ ಡಾ. ಸಂಜೀವಕುಮಾರ ಅಪ್ಪೆ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net