ದಾಸೋಹ ದಿನಾಚರಣೆ

Kayak Yogi Foundation Dasooh Dinacharane At Papnash
Published on

ಬೀದರ್: ಕಾಯಕ ಯೋಗಿ ಸಾಮಾಜಿಕ ಸೇವಾ ಫೌಂಡೇಷನ್ ವತಿಯಿಂದ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಐದನೇ ಪುಣ್ಯಸ್ಮರಣೆ ನಿಮಿತ್ತ ಇಲ್ಲಿಯ ಪಾಪನಾಶ ದೇವಸ್ಥಾನದಲ್ಲಿ ಈಚೆಗೆ ದಾಸೋಹ ದಿನಾಚರಣೆ ಹಾಗೂ ಕಾಯಕ ಜೀವಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಡಾ. ಶಿವಕುಮಾರ ಸ್ವಾಮೀಜಿ ಅವರು ಸಮಾಜದ ಉದ್ಧಾರಕ್ಕಾಗಿ ಬದುಕು ಸವೆಸಿದ್ದರು. ಅವರ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಹೇಳಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಮಲಿಂಗ ಬಿರಾದಾರ, ಮುಖಂಡರಾದ ಜಗನ್ನಾಥ ಕರಂಜೆ ಹಾಗೂ ಚಂದ್ರಕಾಂತ ಪಾಟೀಲ ಚಿಮಕೋಡ್ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಸೋಮಶೇಖರ ಪಾಟೀಲ, ಸಂಗೀತ ಕಲಾವಿದೆ ರೇಖಾ ಅಪ್ಪಾರಾವ್ ಸೌದಿ, ಭಾಲ್ಕಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ವಕೀಲ ಬಾಪುರಾವ್ ದೇಶಮುಖ, ಫೌಂಡೇಷನ್ ಪದಾಧಿಕಾರಿಗಳಾದ ಸುದರ್ಶನ ಬಿರಾದಾರ, ರಾಜಕುಮಾರ ನಾಯಿಕೋಡೆ, ಜ್ಯೋತಿಷ್ ಹಲಬರ್ಗೆ, ರಾಜಕುಮಾರ ಪಾಟೀಲ ಚಂದಾಪುರ, ಪವನ್ ಬಿರಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net