

ಬೀದರ್: ಇಲ್ಲಿಯ ಆನಂದನಗರದ ಬೌದ್ಧ ವಿಹಾರದಲ್ಲಿ ಮಹಿಳಾ ಉಪಾಸಿಕಾ ಶಿಬಿರ ಈಚೆಗೆ ಸಮಾರೋಪಗೊಂಡಿತು.
ಡಾ. ಬಿ.ಆರ್. ಅಂಬೇಡ್ಕರ್ ಅವರು ತಳ ಸಮುದಾಯದಲ್ಲಿನ ಮೌಢ್ಯ ಹೋಗಲಾಡಿಸಲು ಶ್ರಮಿಸಿದ್ದರು ಎಂದು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆನಂದನಗರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಕಾಶೀನಾಥ ಚಲ್ವಾ ಹೇಳಿದರು.
ಜಗತ್ತಿನಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಬುದ್ಧ ತತ್ವಗಳ ಪಾಲನೆ ಅವಶ್ಯಕವಾಗಿದೆ ಎಂದು ತಥಾಗತ ಮಿತ್ರ ಮಂಡಳಿಯ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ನುಡಿದರು.
ಬಿ.ಎಸ್.ಐ. ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಸದಾಫುಲೆ ಮಾತನಾಡಿದರು. ಭಂತೆ ಸಂಘ ಶಿವಕ ಸಾನಿಧ್ಯ ವಹಿಸಿದ್ದರು.
ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಮನೋಹರ ಮೋರೆ, ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಆಣದೂರೆ, ಪ್ರಮುಖರಾದ ಶಂಕರರಾವ್ ಸಿಂಧೆ, ಯಶಪಾಲ್ ಬೋರೆ, ನರಸಪ್ಪ ಮೇಟಿ, ತುಳಸಿರಾಮ ಬಡಗೇರ, ಹುಸೇಣಿ, ಸುನೀಲ್ ಶಿಂದೆ, ಕೃಷ್ಣಮೂರ್ತಿ ಬಡಿಗೇರ, ಸುಧಾಮ ಕಾಂಬಳೆ, ಸುನೀಲ್ ಗಾಯಕವಾಡ್, ಗಣಪತಿ ಭಕ್ತಾ ಮತ್ತಿತರರು ಇದ್ದರು.
ಸೋಲಾಪುರದ ನಂದಾತಾಯಿ ಕಾಟೇಕರ್ ಹಾಗೂ ವೈಶಾಲಿ ಮೋರೆ ಶಿಬಿರ ನಡೆಸಿಕೊಟ್ಟರು. ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಶಿಬಿರ ಹಮ್ಮಿಕೊಳ್ಳಲಾಗಿತ್ತು.