ಬಸವ ಯುಗ ವೈಭವ ಗ್ರಂಥ ಪ್ರಕಟಣಾ ಯೋಜನೆಗೆ ಚಾಲನೆ

Basava yug Vaibhav
Published on

ಬೀದರ್: 12 ರಿಂದ 21 ನೇ ಶತಮಾನದ ವರೆಗಿನ ಬಸವಾದಿ ಶರಣರ ಪರಂಪರೆಯ ಚರಿತ್ರೆಯನ್ನು ಒಳಗೊಂಡ `ಬಸವಯುಗ ವೈಭವ' ಬೃಹತ್ ಗ್ರಂಥ ಪ್ರಕಟಣಾ ಚಟುವಟಿಕೆಗೆ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಲೋಗೊ ಮತ್ತು ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಲಂಡನ್ ಯುವ ಪರಿಷತ್ ಸದಸ್ಯ ಆದೀಶ ವಾಲಿ ಗುರುಬಸವ ಪೂಜೆ ನೆರವೇರಿಸಿದರು. ಬಾಗಲಕೋಟೆಯ ಬಸವ ಕಲಾನಿಕೇತನ ಸಂಘದ ಅಧ್ಯಕ್ಷೆ ಡಾ. ಸುಮಂಗಲಾ ಬಿ. ಅನಗನವಾಡಿ ಉದ್ಘಾಟಿಸಿದರು. ಕಲಬುರಗಿಯ ಶರಣ ಸಂಸ್ಕøತಿ ದೃಶ್ಯ ಕಲಾ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎ.ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಗ್ರಂಥ ಪ್ರಕಟಣಾ ನಗರ ಸಮಿತಿ ಅಧ್ಯಕ್ಷ ಗುರುಸಿದ್ದಪ್ಪ ಬಿರಾದಾರ್, ಉದ್ಯಮಿ ಸುಧೀರ ಕೊಠಾಳೆ, ಗುತ್ತಿಗೆದಾರ ಪ್ರಭು ಖಾನಾಪುರೆ ಅಷ್ಟೂರೆ, ಕಲಾವಿದರಾದ ಅನೀಲಕುಮಾರ ಮಜಗೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನಂತರ ನಡೆದ ಪ್ರಧಾನ ಸಮಾರಂಭವನ್ನು ಎಚ್‍ಕೆಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ ವಾಲಿ ಮತ್ತು ಅಂಜನಾ ಡಾ. ರಜನೀಶ ವಾಲಿ ಅವರು ಉದ್ಘಾಟಿಸಿದರು. ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಲೋಗೋ ಬಿಡುಗಡೆ ಮಾಡಿ ಮಾತನಾಡಿದರು. ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೂಡಲ ಸಂಗಮದ ಬಸವ ಶರಣ ಕಲಾ ಸಂಗ್ರಹಾಲಯದ ಅಧ್ಯಕ್ಷ ಡಾ. ಬಸವರಾಜ ಅನಗನವಾಡಿ ಅವರು ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಯುಗ ವೈಭವ ಗ್ರಂಥ ಪ್ರಕಟಣಾ ಸಮಿತಿ ಅಧ್ಯಕ್ಷ ಶಾಮಲಿಂಗ ಜವಳಗಿ, ಯೋಜನೆ ಕುರಿತು ಮಾಹಿತಿ ನೀಡಿದರು. 12 ರಿಂದ 21 ನೇ ಶತಮಾನದ ವರೆಗಿನ ಅವಧಿಯಲ್ಲಿನ ಶರಣರ ಹೆಜ್ಜೆ ಗುರುತು ದಾಖಲಿಸಲಾಗುತ್ತದೆ. ಬಸವಪೂರ್ವ ಯುಗದಲ್ಲಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ಚಿತ್ರಣ, ಬಸವಯುಗದಲ್ಲಿ ಈ ಕ್ಷೇತ್ರಗಳಲ್ಲಿ ಆದ ಬದಲಾವಣೆಗಳನ್ನು ಬಸವಯುಗ ವೈಭವ ಬೃಹತ್ ಗ್ರಂಥವು ಒಳಗೊಂಡಿರಲಿದೆ. ಜಾನಪದ, ಕಲೆ, ಸಾಹಿತ್ಯ, ನಾಟಕ, ಬಯಲಾಟ, ಚಲನಚಿತ್ರ ಹೀಗೆ ವಿವಿಧ ಮಾಧ್ಯಮಗಳ ಮೂಲಕ ಪ್ರಸಾರವಾಗಿರುವ ಬಸವಾದಿ ಶರಣ ಪರಂಪರೆಯ ಚಿತ್ರಣವೂ ಈ ಕೃತಿಯಲ್ಲಿ ಇರಲಿದೆ ಎಂದು ತಿಳಿಸಿದರು.
ಎಂಜಿನಿಯರ್ ಹಾವಶೆಟ್ಟಿ ಪಾಟೀಲ್,  ಕರ್ಪೂರ್ ಕನ್‍ಷ್ಟ್ರಕ್ಷನ್ ಸಂಸ್ಥೆಯ ರಾಜಶೇಖರ ಕರ್ಪೂರ, ಭೂಮರಡ್ಡಿ ಕಾಲೇಜಿನ ಪ್ರಾಚಾರ್ಯ ಡಾ. ಪಿ. ವಿಠಲರೆಡ್ಡಿ, ಉದ್ಯಮಿ ವೀರಕುಮಾರ ಮಜಗೆ ಮುಖ್ಯ ಅತಿಥಿಯಾಗಿದ್ದರು.
ರಾಜಣ್ಣ ಶಂಭು ಸ್ವಾಗತಿಸಿದರು. ಬಸವಯುಗ ವೈಭವ ಗ್ರಂಥ ಪ್ರಕಟಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ರುದನೂರ ನಿರೂಪಿಸಿದರು. ವೀರಕುಮಾರ ಮಂಠಾಳಕರ್ ವಂದಿಸಿದರು. ಸಂಜೀವ ಸ್ವಾಮಿ ಉಜನಿ ಮತ್ತು ರೇಣುಕಾ ಮಳ್ಳಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಲ್ಲಿಕಾರ್ಜುನ ಸ್ವಾಮಿ ನಾಗಮಾರಪಳ್ಳಿ ತಬಲಾ ಸಾಥ್ ನೀಡಿದರು. ಪ್ರೊ. ಗಂಗಶೆಟ್ಟಿ ಪಾಟೀಲ್, ಶ್ರೀಕಾಂತ ಬಿರಾದಾರ್, ಶಂಕರ ಪಾಟೀಲ್ ದಾಡಗಿ, ಭೀಮಾಶಂಕರ ಬಿರಾದಾರ್, ಚಂದ್ರಶೇಖರ ತೂಗಾ,  ಪ್ರಕಾಶ ಬಿರಾದಾರ್, ಅಶೋಕ ರೇವಣೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರನ್ನು, ಅಮರಗಣಂಗಳ ಕಾಯಕ ಚಿತ್ರ ದರ್ಶನ ಗ್ರಂಥ ಪ್ರಕಟಣೆಗೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net