ಚೌಡಯ್ಯ, ಬೊಮ್ಮಗೊಂಡೇಶ್ವರ ತತ್ವ ಪಾಲಿಸಿ

Gond Vidyarthi Sangh Photo-2
Published on

ಬೀದರ್: ಅಂಬಿಗರ ಚೌಡಯ್ಯ ಹಾಗೂ ಬೊಮ್ಮಗೊಂಡೇಶ್ವರ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಗೊಂಡ(ಕುರುಬ) ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಸುಚಿತಾನಂದ ಮಲ್ಕಾಪುರೆ ಹೇಳಿದರು.
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಗಾಂಧಿಗಂಜ್‍ನ ಕನಕ ಭವನದಲ್ಲಿ ಈಚೆಗೆ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ, ಬೊಮ್ಮಗೊಂಡೇಶ್ವರ ಚರಿತ್ರೆ ಕುರಿತ ಉಪನ್ಯಾಸ ಹಾಗೂ ಸಂಘದ 2024ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯ ಹಾಗೂ ಬೊಮ್ಮಗೊಂಡೇಶ್ವರರು ಮಾನವ ಕಲ್ಯಾಣಕ್ಕೆ ಶ್ರಮಿಸಿದ್ದರು ಎಂದು ನುಡಿದರು.
ಸಂಘ ಶಿಕ್ಷಣ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಯಂತಿ ಕಾರ್ಯಕ್ರಮಗಳ ಮೂಲಕ ಮಹಾ ಪುರುಷರ ಜೀವನ ಹಾಗೂ ಸಾಧನೆ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ತಿಳಿಸಿದರು.
ಎಪಿಎಂಸಿ ಸಹಾಯಕ ನಿರ್ದೇಶಕ ಸಂತೋಷ ಮುದ್ದಾ ಉದ್ಘಾಟಿಸಿದರು. ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ ಅಲ್ಲೂರೆ ದಿನದರ್ಶಿಕೆ ಬಿಡುಗಡೆ ಮಾಡಿದರು.
ಬೀದರ್ ವಿಶ್ವವಿದ್ಯಾಲಯದ ಡೀನ್ ಡಾ. ಶರಣಪ್ಪ ಮಲಗೊಂಡ ಅವರನ್ನು ಸನ್ಮಾನಿಸಲಾಯಿತು.
ಕಲಾವಿದ ಚನ್ನಬಸವ ಬಿಕ್ಲೆ ಹಾಗೂ ಭವಾನಿ ವಗ್ಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕನಕ ಭವನದ ಅಧ್ಯಕ್ಷ ನಾಗರಾಜ ನಂದಗಾಂವ್, ಪಿಡಿಒ ಸಂಘದ ಜಿಲ್ಲಾ ಘಟಕದ ಕೋಶಾಧ್ಯಕ್ಷ ದೇವಪ್ಪ ಚಾಂಬೋಳೆ, ನಿಜಶರಣ ಅಂಬಿಗರ ಚೌಡಯ್ಯ ಯುವ ಸೇನೆ ಅಧ್ಯಕ್ಷ ಸುನೀಲ್ ಭಾವಿಕಟ್ಟಿ ಇದ್ದರು.
ಎಂ.ಪಿ. ವೈಜಿನಾಥ ಸ್ವಾಗತಿಸಿದರು. ಆತ್ಮಾನಂದ ಬಂಬಳಗಿ ನಿರೂಪಿಸಿದರು. ಭೀಮಷಾ ಬಸಲಾಪುರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net