ಶ್ರೀರಾಮ ಮೂರ್ತಿ ಮೆರವಣಿಗೆ 23ಕ್ಕೆ

Hava Mallinath Maharaj Photo-1
Published on

ಬೀದರ್: ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ವತಿಯಿಂದ ಜ. 23 ರಂದು ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದಿಂದ ಮಲ್ಕಾಪುರದ ಭಾವಲಿಂಗ ಮಲ್ಲಿನಾಥ ಆಶ್ರಮದ ವರೆಗೆ ಭವ್ಯ ಶ್ರೀ ರಾಮ ಮೂರ್ತಿ, ಸುಭಾಷ್ ಚಂದ್ರ ಬೋಸ್ ಹಾಗೂ ಹುತಾತ್ಮ ಸೈನಿಕರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಪ್ರಯುಕ್ತ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದ್ದಾರೆ.
ಕೊಳಾರ(ಕೆ) ಗ್ರಾಮದ ಶಿವಶಕ್ತಿ ಲಿಂಗ ಮಲ್ಲಿನಾಥ ಆಶ್ರಮದಿಂದ ನೌಬಾದ್, ಶಿವನಗರ, ಕೇಂದ್ರ ಬಸ್ ನಿಲ್ದಾಣ, ಮಡಿವಾಳ ವೃತ್ತ, ಅಂಬೇಡ್ಕರ್ ವೃತ್ತ, ಭಗತ್‍ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಮಂಗಲಪೇಟ್ ಮೂಲಕ ಮಲ್ಕಾಪುರ ಆಶ್ರಮದ ವರೆಗೆ ಮೆರವಣಿಗೆ ಜರುಗಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net