

ಬೀದರ್: ಇಲ್ಲಿಯ ಬ್ಯಾಂಕ್ ಕಾಲೊನಿಯ ಶ್ರೀ ಗುರು ಪಬ್ಲಿಕ್ ಸ್ಕೂಲ್‍ನಲ್ಲಿ ನಾಲ್ಕನೇ ವಾರ್ಷಿಕೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು.
ಉದ್ಘಾಟನೆ ನೆರವೇರಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರು, ಪ್ರಸ್ತುತ ಮಕ್ಕಳಿಗೆ ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣದ ಅಗತ್ಯವಿದೆ. ಶ್ರೀ ಗುರು ಸ್ಕೂಲ್ ಈ ದಿಸೆಯಲ್ಲಿ ಸಾಗಿಸುತ್ತಿರುವುದು ಶ್ಲಾಘನೀಯ ಎಂದರು.
ಮೊಬೈಲ್ ಬಳಕೆ ಮಿತಗೊಳಿಸುವಿಕೆ ರೂಪಕ, ನೃತ್ಯ, ಗಾಯನ ಸೇರಿದಂತೆ ಮಕ್ಕಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆದವು.
ಶಾಲೆಯ ಅಧ್ಯಕ್ಷ ನರಸಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರೇಮಸಾಗರ್ ದಾಂಡೇಕರ್ ಮುಖ್ಯ ಅತಿಥಿಯಾಗಿದ್ದರು. ಡಾ. ಕೆ. ಝರೆಪ್ಪ, ನೀಲಮ್ಮ ಶೇರಿಕಾರ್, ಶಾಲೆಯ ಉಪಾಧ್ಯಕ್ಷ ಸಂಜೀವ ರೆಡ್ಡಿ, ಕಾರ್ಯದರ್ಶಿ ಬಸವರಾಜೇಶ್ವರಿ, ಖಜಾಂಚಿ ಮಹಾನಂದ, ಶಿಕ್ಷಕರು ಇದ್ದರು.