ಪ್ರೌಢಶಾಲಾ ಶಿಕ್ಷಕರಿಗೆ ವೇತನ ಬಡ್ತಿಗೆ ಒತ್ತಾಯ

Kalyan Karnataka Techers Sangh Photo
Published on

ಬೀದರ್: 2008 ರಲ್ಲಿ ನೇಮಕಗೊಂಡ ಜಿಲ್ಲೆಯ ಸರ್ಕಾರಿ ಪೌಢಶಾಲೆಗಳ ಶಿಕ್ಷಕರಿಗೆ ವಿಶೇಷ ಭತ್ಯೆ ಬದಲು ವೇತನ ಬಡ್ತಿ ಕೊಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ನಗರದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಭಾರ ಉಪ ನಿರ್ದೇಶಕ ವೆಂಕಟೇಶ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು. ಹೈಕೋರ್ಟ್ ತೀರ್ಪಿನ ಅನ್ವಯ ವೇತನ ಬಡ್ತಿ ನೀಡಲು ಮುಖ್ಯಶಿಕ್ಷಕರಿಗೆ ಆದೇಶಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಪದಾಧಿಕಾರಿಗಳಾದ ಅನಿಲಕುಮಾರ ಶೇರಿಕಾರ್, ಎಂ.ಡಿ. ಶಾಬೊದ್ದಿನ್, ಬೌದ್ಧಪ್ರಕಾಶ, ಸೂರ್ಯಕಾಂತ ಸಿಂಗೆ, ಸಂತೋಷ, ಸತೀಶ ಸಿದ್ಧೇಶ್ವರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net