ರೋಗಿಗಳಿಗೆ ಹಣ್ಣು ವಿತರಣೆ

Tanmay Trust -Eshwar Khandre Birthday Photo
Published on

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಜನ್ಮದಿನದ ಪ್ರಯುಕ್ತ ಎಂ.ಎಸ್. ತನ್ಮಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈಶ್ವರ ಖಂಡ್ರೆ ಅವರು ಸತತ ನಾಲ್ಕನೇ ಬಾರಿಗೆ ಶಾಸಕರಾಗಿ, ಸಚಿವರಾಗಿ ಭಾಲ್ಕಿ ವಿಧಾನಸಭಾ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೀಗಾಗಿ ಸಾಮಾಜಿಕ ಚಟುವಟಿಕೆಯೊಂದಿಗೆ ಅವರ ಜನ್ಮದಿನ ಆಚರಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ತುಕಾರಾಮ ಚಿದ್ರಿ ಹೇಳಿದರು.
ಪ್ರಮುಖರಾದ ಬಾಬುರಾವ್ ಸಂಗೋಳಗಿ, ಸಂಗಮೇಶ ಏಣಕೂರ, ನವೀನ್ ಅಲ್ಲಾಪುರ, ರಮೇಶ ಮರ್ಜಾಪುರ, ಶಿವರಾಜ ಹಮಿಲಾಪುರ, ಆನಂದ ಕಮಠಾಣ, ದೀಪಕ್ ಚಿದ್ರಿ, ಬಾಬುರಾವ್ ಚಿದ್ರಿ, ಶಿವಕುಮಾರ ರಾಗಪುರೆ, ಯಲ್ಲಾಲಿಂಗ, ಅನಿಲ್ ಪೂಜಾರಿ, ಸುನಿಲ್ ಚಿದ್ರಿ, ಶ್ರೀಕಾಂತ ದರ್ಗಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net