

ಬೀದರ್: ಎನ್‍ಪಿಎಸ್ ರದ್ದುಪಡಿಸಲು ಸಚಿವ ಸಂಪುಟ ಸಭೆಯಲ್ಲಿ ಒತ್ತಡ ತರುವಂತೆ ಎನ್.ಪಿ.ಎಸ್. ನೌಕರರ ಸಂಘವು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಅವರನ್ನು ಒತ್ತಾಯಿಸಿತು.
ಸಂಘದ ಪದಾಧಿಕಾರಿಗಳು ನಗರದಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಎನ್‍ಪಿಎಸ್ ರದ್ದತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯುವೆ ಎಂದು ಸಚಿವರು ಭರವಸೆ ನೀಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಮಹಿಮಾಕರ್, ಉಪಾಧ್ಯಕ್ಷರಾದ ರಾಜಕುಮಾರ ಕರುಣಾಸಾಗರ, ಸಂತೋಷ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ತಳವಾಡೆ, ಜಿಲ್ಲಾ ಘಟಕದ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು ಹಾಗೂ ಎನ್.ಪಿ.ಎಸ್. ನೌಕರರು ಇದ್ದರು.