ಎಬಿವಿಪಿ ವಿವೇಕ್ ಟ್ರೋಫಿ 23ರಂದು

Aurad 1
Published on

ಔರಾದ್: ಸ್ವಾಮಿ ವಿವೇಕಾನಂದ ಹಾಗೂ ಸುಭಾಷಚಂದ್ರ ಬೋಸ್ ಜಯಂತಿ ನಿಮಿತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಜ.23ರಂದು ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿವೇಕ್ ಟ್ರೋಫಿ (ಜಿಲ್ಲಾ ಮಟ್ಟದ) ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳೆ ತಿಳಿಸಿದರು.
ಪಟ್ಟಣದಲ್ಲಿ ಟ್ರೋಫಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ವಿದ್ಯಾರ್ಥಿನಿಯರಿಗೆ ಥ್ರೋಬಾಲ್ ಪಂದ್ಯಗಳಿರಲಿವೆ. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯ ಮಟ್ಟಕ್ಕೆ ಕಳಿಸಲಾಗುವುದು. ರಾಜ್ಯದಲ್ಲಿ ವಿಜೇತರಿಗೆ ಪ್ರಥಮ ಬಹುಮಾನ 15 ಸಾವಿರ ರೂ. ನಗದು, ದ್ವಿತೀಯ 10 ಸಾವಿರ ರೂ. ಮತ್ತು ತೃತೀಯ 5000 ರೂ. ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಕೋರಿದರು.
ಪರಿಷತ್ ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾಕಲೆ, ಪ್ರಮುಖರಾದ ಡಾ.ಶಾಲಿವಾನ ಉದಗೀರೆ, ಡಿ.ಡಿ. ಬೋಳೆಗಾಂವೆ, ಶಿವಾನಂದ ಮುಕ್ತೇದಾರ, ಶಾಂತಕುಮಾರ ಸಂಗೋಳಗೆ, ಬಸವರಾಜ ಶೆಟಕಾರ, ಅನೀಲ ಮೇತ್ರೆ, ರಮೇಶ ವಾಘಮೋಡೆ, ಅನೀಲ ದೇವಕತ್ತೆ, ಸೈದಪ್ಪ ಜಗದಾಳೆ, ಪ್ರಶಾಂತ ಔರಾದೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net