ಜಗತ್ತು ಆಳುತ್ತದೆ ಜ್ಞಾನ

13BK1
Published on

ಬಸವಕಲ್ಯಾಣ: ಜ್ಞಾನವು ಜಗತ್ತನ್ನು ಆಳುತ್ತದೆ ಎಂದು ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು ಎಂದು ಎಸ್ಎಸ್ಕೆಬಿ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ. ಪಾಟೀಲ್ ಹೇಳಿದರು.
ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ನಗರದ ಎಸ್ಎಸ್ಕೆ ಬಸವೇಶ್ವರ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಭಾರತದ ಕೀರ್ತಿಯನ್ನು ವಿಶ್ವವ್ಯಾಪಿಯಾಗಿ ಪಸರಿಸಿದವರು ವಿವೇಕಾನಂದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಪ್ರೊ.ಆರ್.ಡಿ. ಬಾಲಕಿಲೆ ಮಾತನಾಡಿ, ಯುವ ಶಕ್ತಿಯಲ್ಲಿ ಚೈತನ್ಯವನ್ನು ಜಾಗೃತಗೊಳಿಸಿದ ಸ್ವಾಮಿ ವಿವೇಕಾನಂದರ ತತ್ವ, ಸಂದೇಶಗಳು ಯುವ ಜನಾಂಗಕ್ಕೆ ಸರ್ವಕಾಲಕ್ಕೂ ಸೂತರ್ಿದಾಯಕವಾಗಿವೆ ಎಂದು ಹೇಳಿದರು.
ಡಾ.ಶಿವಕುಮಾರ ಪಾಟೀಲ್, ಕಲ್ಯಾಣಪ್ಪ ನಾವದಗಿ, ರತ್ನಾಸಾಗರ ರಗಟೆ, ಸನತರಡ್ಡಿ, ಇಂದ್ರಜೀತರಡ್ಡಿ, ವಿನಾಯಕ ಮುಳ್ಳೂರ, ಉಲ್ಲಾಸ ಬೊಕ್ಕೆ, ಶಿವಕುಮಾರ ಖೊಲ್ಲೆ ಇತರರಿದ್ದರು. ಎನ್ನೆಸ್ಸೆಸ್ ಅಧಿಕಾರಿ ಪ್ರೊ.ವಿಠೋಬಾ ಡೊಣ್ಣೇಗೌಡರ ಸ್ವಾಗತಿಸಿದರು. ನೇತ್ರಾ ನಿರೂಪಣೆ ಮಾಡಿದರು. ದೀಪಕ ಕಾಡಾದಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net