ನೆಮ್ಮದಿಗಾಗಿ ಸಂಗೀತ ಆಲಿಸಿ

13BK4
Published on

ಬಸವಕಲ್ಯಾಣ: ಶಾಂತಿ, ನೆಮ್ಮದಿಗಾಗಿ ಪ್ರತಿಯೊಬ್ಬರೂ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಯರಬಾಗದ ಶ್ರೀ ಚನ್ನವೀರಯ್ಯ ಸ್ವಾಮೀಜಿ ಹೇಳಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಟ್ರಸ್ಟ್ ನಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಪಂಢರಗೇರಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಧಮ್ಮ ದೀಪ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸ ನಡೆಯಬೇಕಿದೆ ಎಂದರು.
ಸದಲಾಪುರ ಹಿರೇಮಠ ಸಂಸ್ಥಾನದ ಶ್ರೀ ಸಿದ್ಧಲಿಂಗ ಶಿವಾಚಾರ್ಯ, ಪತ್ರಕರ್ತ ಕಲ್ಯಾಣರಾವ ಮದರಗಾಂವಕರ್ ಮಾತನಾಡಿದರು. ಶ್ರೀ ಮಲ್ಲಯ್ಯ ಸ್ವಾಮೀಜಿ, ಶ್ರೀ ಅನೀಲಕುಮಾರ ಸ್ವಾಮೀಜಿ ಸಾನ್ನಿಧ್ಯ, ಗ್ರಾಪಂ ಅಧ್ಯಕ್ಷೆ ಸುರೇಖಾ ಬಸವರಾಜ ಬಾಜಿಗಾರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜರಡ್ಡಿ, ಎಂ.ಸುಧಾಕರ, ಚನ್ನಮ್ಮ ಚಿಂಚೋಳಿ, ಜೈತುನಬಿ ಹೈದರಸಾಬ್, ವೆಂಕಟ ಪೋಶೆಟ್ಟಿ, ದೇವಿಂದ್ರಪ್ಪ ಹಿರಕೋಳ, ಸಂತೋಷ ಪಾಟೀಲ್ ಬಿರಾದಾರ, ಕಲ್ಲಪ್ಪ ನಾಗೂರ, ನಾಗಣ್ಣ ಬಿರಾದಾರ, ಜಗನ್ನಾಥ ಪೊಲೀಸ್ ಪಾಟೀಲ್, ಅಣ್ಣೆಪ್ಪ ಆನಂದಪ್ಪ, ಲಕ್ಷ್ಮಣ ಮೇಲನಕೇರಿ, ಆಕಾಶ ಪರಸನೋರ್, ದತ್ತಾತ್ರಿ ಕೀರ್ತಿಕರ್ ಇತರರಿದ್ದರು. ನಾಗಣ್ಣ ಬಿರಾದಾರ ನಿರೂಪಣೆ ಮಾಡಿ ವಂದಿಸಿದರು. ಜಾನಪದ ಕಲಾವಿದರಾದ ವಿಶಾಲ ಸುಧಾಕರ ಸಿಂಧೆ ಜಾನಪದ, ಸರಳ ಪರಸನೋರ್ ವಚನ ಗಾಯನ ನಡೆಸಿಕೊಟ್ಟರು. ಜನಾರ್ಧನ ವಾಘಮಾರೆ ತಬಲಾ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net