ವಿದ್ಯೆ ಕಲಿಸಿದ ಗುರು-ಶಾಲೆ ಮರೆಯದಿರಿ

Guruvandane
Published on

ಹುಲಸೂರು: ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಗುರು ಮತ್ತು ಅಕ್ಷರ ಜ್ಞಾನ ಪಡೆದ ಶಾಲೆಯನ್ನು ಎಂದಿಗೂ ಮರೆಯಬಾರದು ಎಂದು ಶ್ರೀಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜೆಬಿಕೆ ಪ್ರೌಢಶಾಲೆಯಲ್ಲಿ ಕಲಿತ 2000ನೇ ಸಾಲಿನ ವಿದ್ಯಾರ್ಥಿಗಳಿಂದ ಬುಧವಾರ ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರ ಬದುಕಿನಲ್ಲಿ ಸ್ನೇಹ ಮುಖ್ಯ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಳೆಯ ವಿದ್ಯಾರ್ಥಿಗಳೆಲ್ಲ ಸ್ನೇಹದಿಂದ ಇದ್ದು, ಕಲಿತ ಶಾಲೆಯಲ್ಲಿ ಮತ್ತೆ ಸೇರಿದ್ದು ಖುಷಿ ತಂದಿದೆ ಎಂದರು.
ವಿದ್ಯೆ ಎಂದರೆ ಜೀವನದಲ್ಲಿ ಪರಿವರ್ತನೆ ತರುವ ಮಾರ್ಗ. ಶೈಕ್ಷಣಿಕ ಸಾಧನೆ ಮಾಡಿದ ನಂತರ ಇದಕ್ಕೆ ಕಾರಣರಾದ ಗುರು-ಹಿರಿಯರನ್ನು ಮರೆಯಬಾರದು. ಕಲಿತ ಶಾಲೆ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಸಹಕಾರ ಮಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯಗುರು ಗದಗಯ್ಯ ಮಠಪತಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಕುಟುಂಬ ಸಮೇತ ಕಾರ್ಯಕ್ರಮಕ್ಕೆ ಆಗಮಿಸಿದ್ದು ಖುಷಿ ತಂದಿದೆ ಎಂದರು.
ನಿವೃತ್ತ ಶಿಕ್ಷಕರಾದ ವೀರಯ್ಯ ಪತ್ರಿ, ಹಳೆಯ ವಿದ್ಯಾರ್ಥಿಯಾದ ತೋಟಗಾರಿಕೆ ಇಲಾಖೆ ಅಧಿಕಾರಿ ಸಂತೋಷ ಕೊರಾಳೆ, ಗಣಪತಿ ಹಾರಕೂಡೆ, ಡಾ.ಪ್ರವೀಣ ಆದೆಪ್ಪ , ಸುನೀಲ ಕಾಡಾದಿ, ವಿಜಯಕುಮಾರ ಚಾಂಗಲೂರೆ, ಶಕುಂತಲಾ ತಾಂಬೂಳೆ ಮಾತನಾಡಿದರು.
ಪ್ರಮುಖರಾದ ಭೀಮಣ್ಣ ಧಬಾಲೆ, ಕಲ್ಯಾಣರಾವ ಬೆಲ್ಲಾಳೆ, ಚಂದ್ರಕಾಂತ ಕೊರಾಳೆ, ಶಿವರುದ್ರಪ್ಪ ಧುಮ್ಮನಸೂರೆ, ಶಿವರಾಜ ಮಾಳಚಾಪುರೆ, ವಿಜಯಕುಮಾರ ನರಶೆಟ್ಟಿ, ಅಶೋಕ ಕಮಠಾಣೆ, ಚಂದ್ರಕಾಂತ ಪಾರಶೆಟ್ಟಿ, ಗಂಗಾಧರ ಪೂಜೆ, ಓಂಕಾರ ವಾಂಜರಖೇಡೆ, ಜಗನ್ನಾಥ ನಂದಗೆ, ಶ್ರೀಕಾಂತ ಇಲಾಮಲ್ಲೆ, ಬಸವಕುಮಾರ ಘಂಟೆ, ಸುನೀಲ ಕಾಡಾದಿ, ಲಕ್ಷ್ಮಣ ವಾಗ್ದಾಳೆ, ರಾಣಿ ಲಿಂಬುಣಿ, ಸೀಮಾ ಜಾಂತೆ, ಕೀರ್ತಿ ನರಶೆಟ್ಟಿ, ಮಹಾದೇವಿ ಹಾರಕೂಡೆ ಇತರರಿದ್ದರು. ಶಿವಕುಮಾರ ಚಿಂಚೋಳೆ ಸ್ವಾಗತಿಸಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net