ಐದು ಮರಿಗಳಿಗೆ ಜನ್ಮ ನೀಡಿದ ಮೇಕೆ

Hedgapur
Published on

ಔರಾದ್: ಹೆಡಗಾಪುರ ಗ್ರಾಮದ ಸಂಗಮ್ಮ ಬಸವರಾಜ ಮೇಗೂರೆ ಅವರ ಮೇಕೆ ಐದು ಮರಿಗಳಿಗೆ ಜನ್ಮ ನೀಡಿದೆ.
ಮೇಕೆ ಮೂರು ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯ. ಆದರೆ ಐದು ಮರಿಗಳಿಗೆ ಜನ್ಮ ನೀಡುವುದು ಅಪರೂಪ. ಈ ಮೇಕೆ ಪ್ರತಿಸಲ ಒಂದು ಅಥವಾ 2 ಮರಿಗಳಿಗೆ ಜನ್ಮ ನೀಡುತ್ತಿತ್ತು. ಈಗ ಐದು ಮರಿಗಳಿಗೆ ಜನ್ಮ ನೀಡಿದ್ದು, ಅದರಲ್ಲಿ 4 ಗಂಡು, ಒಂದು ಹೆಣ್ಣು ಇದೆ. ಎಲ್ಲವೂ ಆರೋಗ್ಯದಿಂದ ಇವೆ ಎಂದ ಸಂಗಮ್ಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net