ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ

NYK Speech Compitation Photo
Published on

ಬೀದರ್: ನಗರದ ಗುಂಪಾ ರಸ್ತೆಯಲ್ಲಿ ಇರುವ ಕರ್ನಾಟಕ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ‘ನನ್ನ ಭಾರತ ವಿಕಸಿತ ಭಾರತ @2047’ ಕುರಿತ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ತೋಟಗಾರಿಕೆ ಕಾಲೇಜಿನ ಆಕಾಶ ಕಿರಣ ಪಾಟೀಲ ಪ್ರಥಮ ಸ್ಥಾನ ಗಳಿಸಿದರು.
ಭಾಲ್ಕಿಯ ಸಿ.ಬಿ. ಕಾಲೇಜಿನ ಶಿವಾನಂದ ಕಲ್ಲಪ್ಪ ದ್ವಿತೀಯ ಹಾಗೂ
ಬೀದರ್‍ನ ಕರ್ನಾಟಕ ಪದವಿ ಕಾಲೇಜಿನ ಅಂಜಲಿ ಅಶೋಕ ಎಚ್. ತೃತೀಯ ಸ್ಥಾನ ಪಡೆದರು.
ಜಿಲ್ಲೆಯ ವಿವಿಧೆಡೆಯ 15 ರಿಂದ 29 ವರ್ಷದ ಒಳಗಿನ 60 ಯುವಕ, ಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾಮಟ್ಟದ ವಿಜೇತರು ರಾಜ್ಯಮಟ್ಟಕ್ಕೆ ಅರ್ಹತೆ ಗಳಿಸಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರು ಕ್ರಮವಾಗಿ ತಲಾ ರೂ. 1 ಲಕ್ಷ, ರೂ. 50 ಸಾವಿರ ಹಾಗೂ ರೂ. 25 ಸಾವಿರ (ಇಬ್ಬರಿಗೆ) ಬಹುಮಾನ ಪಡೆಯಲಿದ್ದಾರೆ ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಹೇಳಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಕೆ. ಚಾರಿ, ಬಿ.ಕೆ.ಐ.ಟಿ. ಕೌಶಲಾಭಿವೃದ್ಧಿ ಕೇಂದ್ರದ ಡೀನ್ ಡಾ. ರಾಜಶೇಖರ ಮಠಪತಿ, ಕರ್ನಾಟಕ ಕಾಲೇಜಿನ ಉಪನ್ಯಾಸಕ ಜಗನ್ನಾಥ ಕಮಲಾಪುರೆ ನಿರ್ಣಾಯಕರಾಗಿದ್ದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಶಿವಕುಮಾರ ಸ್ವಾಮಿ ಉದ್ಘಾಟಿಸಿದರು. ಕರ್ನಾಟಕ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಮಟ್ಟದ ಯುವ ಪ್ರಶಸ್ತಿ ಪುರಸ್ಕøತ ಪ್ರಭುಲಿಂಗ ಬಿರಾದಾರ, ರೈಸಿಂಗ್ ಹ್ಯಾಂಡ್ಸ್ ಅರ್ಬನ್ ಆ್ಯಂಡ್ ರೂರಲ್ ಡೆವಲೆಪ್‍ಮೆಂಟ್ ಸೊಸೈಟಿಯ ಅಧ್ಯಕ್ಷ ಸತೀಶ ಬೆಳಕೋಟೆ, ಕಿರಿಯ ತರಬೇತಿ ಅಧಿಕಾರಿ ರವಿ ಪಾಟೀಲ ಇದ್ದರು.
ನೆಹರೂ ಯುವ ಕೇಂದ್ರ, ರೈಸಿಂಗ್ ಹ್ಯಾಂಡ್ಸ್ ಯುತ್ ಅರ್ಬನ್ ಆ್ಯಂಡ್ ರೂರಲ್ ಡೆವಲೆಪ್‍ಮೆಂಟ್ ಸೊಸೈಟಿ ವತಿಯಿಂದ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net