

ಬೀದರ್: ಇಲ್ಲಿಯ ಡಯಟ್‍ನ ಹಿರಿಯ ಉಪನ್ಯಾಸಕ ಡಾ. ಮೊಹಮ್ಮದ್ ಗುಲಸೀನ್ ಅವರಿಗೆ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ ವತಿಯಿಂದ ಕೊಡಲಾಗುವ ರಾಜ್ಯಮಟ್ಟದ ಶೇಕ್ ಫಾತಿಮಾ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ದೊರೆತಿದೆ.
ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗಾಗಿ ಅವರಿಗೆ ಪ್ರಶಸ್ತಿ ಸಂದಿದೆ.
ನಗರದ ಡಯಟ್‍ನಲ್ಲಿ ಶುಕ್ರವಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ ರಾಜ್ಯ ಕಾರ್ಯದರ್ಶಿ ಸಂಜುಕುಮಾರ ಸ್ವಾಮಿ, ಸೂರ್ಯಕಾಂತ ಸಿಂಗೆ, ಅನಿಲಕುಮಾರ ಶೇರಿಕಾರ್, ರವಿಕುಮಾರ ಕುಮನೂರ, ಬೌದ್ಧಪ್ರಕಾಶ, ಸತೀಶಕುಮಾರ ಸಿದ್ಧೇಶ್ವರ, ಗೋವಿಂದ ರೆಡ್ಡಿ, ಕುಶಾಲ್ ಯರನಳ್ಳಿ, ಶಿವಶಂಕರ ಸ್ವಾಮಿ, ನರೇಂದ್ರ ಗೊಂಗಲೆ, ಸಂತೋಷಕುಮಾರ ಪೂಜಾರಿ, ಸುಮೇಶ ಮಾಸಾಳೆ ಇದ್ದರು.