

ಬೀದರ್: ನನ್ನ ಜನ್ಮದಿನ (ಜ.14)ವನ್ನು ಈ ಸಲ ಸಾರ್ವಜನಿಕವಾಗಿ ಆಚರಿಸಿಕೊಳ್ಳದಿರಲು ತೀರ್ಮಾನಿಸಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ, ಜೆಡಿಎಸ್ ನಗರ ಘಟಕ ಅಧ್ಯಕ್ಷ ಅರುಣಕುಮಾರ ಹೊತಪೇಟ್ ಹೇಳಿದ್ದಾರೆ.
ಎಲ್ಲೆಡೆ ಬರದ ಛಾಯೆ ಆವರಿಸಿದೆ. ಜನ್ಮದಿನ ನಿಮಿತ್ತ ಅಭಿಮಾನಿಗಳು ಅನಗತ್ಯ ಹಣ ಖರ್ಚು ಮಾಡಿ ಬ್ಯಾನರ್, ಕಟೌಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹಾಕಬೇಡಿ. ಇದರ ಬದಲು ಬಡವರ ನೆರವಾಗುವ ಕೆಲಸ ಮಾಡುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.