

ಹುಮನಾಬಾದ್: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ನಿಮಿತ್ತ ಬಂದಿರುವ ಮಂತ್ರಾಕ್ಷತೆ, ಆಹ್ವಾನ ಪತ್ರಿಕೆಯನ್ನು ಹಿಂದುಗಳ ಪ್ರತಿ ಮನೆಗೆ ಮುಟ್ಟಿಸುವ ಕೆಲಸ ರಾಮಭಕ್ತರು ಮಾಡಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಸ್ವಾಗತಿಸಿ ಮಾತನಾಡಿ, ಹಿಂದುಗಳ ಹಲವು ವರ್ಷಗಳ ಕನಸು ಸಾಕಾರಗೊಳ್ಳುವ ಕಾಲ ಸಮೀಪಿಸಿದೆ. ಅಯೋಧ್ಯೆ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಆಗುವುದಿಲ್ಲ. ಆದರೆ ಜ.22ರಂದು ಪ್ರತಿ ಹಿಂದು ಮನೆಯಲ್ಲಿ ಹಬ್ಬದಂತೆ ಆಚರಿಸಬೇಕು. ವಿಶೇಷ ಪೂಜೆ, ಸಂಜೆ ದೀಪ ಹಚ್ಚಿ ಶ್ರೀರಾಮ ದೇವರ ಜಪ ಮಾಡಬೇಕು ಎಂದರು.
ಭದ್ರೇಶ ಪಾಟೀಲ್, ಗಿರೀಶ್ ತುಂಬಾ, ಸುನೀಲ ಪಾಟೀಲ್, ಸಂತೋಷ, ಸಂಗಮೇಶ ಇತರರಿದ್ದರು.