

ಬೀದರ್: ಸಂವಿಧಾನ ಸಂರಕ್ಷಣಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಸಹಯೋಗದಡಿ 75ನೇ ಗಣರಾಜ್ಯೋತ್ಸವ ನಿಮಿತ್ತ ಪ್ರಜಾಪ್ರಭುತ್ವ ಉಳಿವಿಗಾಗಿ ಬೃಹತ್ ಜನಜಾಗೃತಿ ಸಮಾವೇಶ ಜ.26ರಂದು ಸಂಜೆ 5ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ಆಯೋಜಿಸಲಾಗಿದೆ ಎಂದು ಸಮಾವೇಶ ಆಯೋಜನ ಸಮಿತಿ ಸಂಚಾಲಕ ಅನೀಲಕುಮಾರ ಬೆಲ್ದಾರ್ ಹೇಳಿದರು.
ನಗರದಲ್ಲಿ ಸಮಾವೇಶದ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದ ಅವರು, ಸಮಾವೇಶವನ್ನು ಅದ್ದೂರಿ, ಅರ್ಥಪೂರ್ಣವಾಗಿ ಮಾಡಲು ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಲಾಗಿದೆ ಎಂದರು.
ವಿಚಾರವಾದಿ ಕನ್ಹಯ್ಯಾಕುಮಾರ್, ಅಮೂಲ್ ಮಿಠಕರಿ, ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಸಂತೋಷ ಲಾಡ್, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ರಹೀಮ್ ಖಾನ್ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸಮಿತಿ ಅಧ್ಯಕ್ಷ ನಾರಾಯಣ ಗಣೇಶ್, ಗೌರವಾಧ್ಯಕ್ಷ ಗೋವರ್ಧನ ರಾಥೋಡ್, ಕಾರ್ಯಧ್ಯಕ್ಷ ಬಾಬು ಪಾಸ್ವಾನ್, ಪ್ರಧಾನ ಕಾರ್ಯದರ್ಶಿ ಜಾನ್ ವೆಸ್ಲಿ, ಪ್ರಮುಖರಾದ ಅಮೃತರಾವ ಚಿಮಕೋಡೆ, ಬಸವರಾಜ ಮಾಳಗೆ, ಅಬ್ದುಲ್ ಮನ್ನಾನ್ ಸೇಠ, ಸುಮಂತ ಕಟ್ಟಿಮನಿ, ಶಿವಾಜಿರಾವ ಪಾಟೀಲ್ ಮುಗನಾಳ, ವಿಠ್ಠಲರಾವ ಪ್ಯಾಗೆ, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಅಶೋಕಕುಮಾರ ಮಾಳಗೆ, ಅವಿನಾಶ ದೀನೆ, ಮಾರುತಿ ಕಂಠೆ, ಸಂದೀಪ ಕಾಂಟೆ, ಶಾಲಿವಾನ ಬಡಿಗೇರ, ಬಾಬುರಾವ ಮಿಠಾರೆ, ವೈಜಿನಾಥ ನಿಡೋದಾ, ರಾಜಕುಮಾರ ಶೇರಿಕಾರ, ಮಲ್ಲಿಕಾರ್ಜುನ ಮೊಳಕೇರೆ, ವಿನೋದ ಬಂದಗೆ, ಗುಣವಂತ ಸಿಂಧೆ, ಮೋಹನ ಡಾಂಗೆ, ಮುಕೇಶ ರಾಯ್, ಮೊಗಲಪ್ಪ ಮಾಳಗೆ, ವಿನೋದ ಸಿಂ, ಸುನೀಲ ಕಡ್ಡೆ ಇತರರಿದ್ದರು.