ನಾಡೋಜ ಗೌರವ ಘನತೆ ಹೆಚ್ಚಳ

Rajshekhar Patil
Published on

ಹುಮನಾಬಾದ್: ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿರಂತರ ಶ್ರಮಿಸುತ್ತಿರುವ ಭಾಲ್ಕಿ ಹಿರೇಮಠದ ಹಿರಿಯ ಸ್ವಾಮೀಜಿ, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರತಿಷ್ಠಿತ ನಾಡೋಜ ಗೌರವಕ್ಕೆ ಭಾಜನರಾಗಿರುವುದಕ್ಕೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಆರು ದಶಕದಿಂದ ಪೂಜ್ಯರು ಸಲ್ಲಿಸುತ್ತಿರುವ ಬಹುಮುಖಿ ಸೇವೆಯನ್ನು ಪರಿಗಣಿಸಿ ನಾಡೋಜಕ್ಕೆ ಆಯ್ಕೆ ಮಾಡುವ ಮುಖಾಂತರ ಹಂಪಿ ವಿವಿ ಪ್ರಶಸ್ತಿಯ ಘನತೆ ಹೆಚ್ಚಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಗುರುಕುಲ ಸ್ಥಾಪಿಸುವ ಮೂಲಕ ಡಾ.ಪಟ್ಟದ್ದೇವರು ಗಡಿ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಿದ್ದಾರೆ. ಬೀದಿಯಲ್ಲಿ ಬಿದ್ದ ಅನಾಥ ಮಕ್ಕಳನ್ನು ರಕ್ಷಿಸಿ ತಂದೆ ಸ್ಥಾನದಲ್ಲಿ ನಿಂತು ರಕ್ಷಿಸುತ್ತಿರುವ ಪೂಜ್ಯರಿಗೆ ತ್ರಿವಿಧ ದಾಸೋಹ ಸೇವೆ ಇನ್ನಷ್ಟು ಮಾಡಲು ಈ ಗೌರವ ಪ್ರೇರಣೆ ನೀಡಿದೆ ಎಂದಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net