

ಹುಮನಾಬಾದ್: ಇಂದಿನ ದಿನಗಳಲ್ಲಿ ಶಿಕ್ಷಣ ಜತೆಗೆ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವುದು ಅತ್ಯವಶ್ಯಕವಾಗಿದ್ದು, ಈ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದು ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡ ಹೇಳಿದರು.
ಪಟ್ಟಣದ ವಿದ್ಯಾನಿಕೇತನ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್‌ನ ವಿಶ್ವಭಾರತಿ ಮತ್ತು ವಿಶ್ವೇಶ್ವರಯ್ಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಆಯಾ ಧರ್ಮಗಳಂತೆ ನಾವು ಬದುಕು ಸಾಗಿಸೋಣ. ಆದರೆ ದೇಶದ ವಿಷಯಕ್ಕೆ ಬಂದಾಗ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಸಹ ನಿರ್ದೇಶಕ ಎಚ್.ಸಿ. ಚಂದ್ರಶೇಖರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿ ಮಗುವಿನ ಚಲನವಲನ ಮೇಲೆ ನಿಗಾ ಇಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ರಾಜಕುಮಾರ ಭೂರೇಶ್ ಮಾತನಾಡಿ, ಪಾಲಕರ ಸಹಕಾರ, ಶಿಕ್ಷಕರ ನಿಸ್ವಾರ್ಥ ಸೇವೆಯಿಂದ ಶಿಕ್ಷಣ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣವಾಗಿದೆ ಎಂದರು.
ನಿವೃತ್ತ ಮುಖ್ಯಗುರು ಕಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಇಒ ವೆಂಕಟೇಶ ಗುಡಾಳ, ಪ್ರಮುಖರಾದ ಸನ್ನಿ ಸಬಾಸ್ಟಿನ್, ಪಿ.ಸುಮಂತ, ಕಿರಣ ಕಟ್ಟಿಮನಿ, ರಫೀಕ್ ಪಟೇಲ್, ಮುಕ್ರಂ, ಮಾಧವರಾವ, ಶಶಿಕಾಂತ ಭಗೋಜಿ, ಮುಖ್ಯ ಗುರುಗಳಾದ ಜೀವನರಡ್ಡಿ ಶೇರಿಕಾರ, ಡ್ಯಾನಿಯಲ್ ಭೂರೇಶ್, ಶಿಕ್ಷಕರಾದ ಮಂಜುಳಾ ತಳಸಂದೇಕರ್, ಮಂಜುಳಾ ಆಣದೂರೆ, ಸಂಗೀತಾ ಕೊಳಾರ್, ಅರುಣಾ ವಿ., ಪದ್ಮಾ, ಅಶ್ವಿನಿ, ಎಲಿಶಾ ನಡುವಿನಕೇರಾ, ಸವಿತಾ, ಕ್ರಿಸ್ತಾಕುಮಾರಿ, ರಜನಿ, ಬೆಂಜಿಮಿನ್, ಸಾಗರ ಢೋಲೆ, ಶ್ರೀಕಾಂತ ಆರ್., ಬಾಬುರಾವ ಹಿರೋಳೆ, ಪಂಕಜ್, ದಿನೇಶ ಭೋಲಾ ಇತರರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಅವರ ಪಾಲಕರನ್ನು ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.