

ಹುಲಸೂರು: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಲ್ಲಿಂದ ಬಂದ ಅಕ್ಷತಾ ಕಲಶಗಳಿಗೆ ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದು ಪರಿಷತ್ನಿಂದ ಸಂಘ ಪರಿವಾರದ ಸಂಘಟನೆಗಳ ಸಹಯೋಗದಡಿ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಮನೆ-ಮನೆಗೆ ಅಕ್ಷತೆ ವಿತರಣೆಗೆ ಶ್ರೀ ಡಾ.ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು.
ಮಠದಿಂದ ಪ್ರಾರಂಭವಾದ ಮೆರವಣಿಗೆ ಮುಖ್ಯ ರಸ್ತೆ, ಗಣೇಶ ನಗರ ಬಡಾವಣೆ, ಸಂತ ರಘುನಾಥ ಮಹಾರಾಜ ಸಂಸ್ಥಾನ ಮಠ, ಗಾಂಧಿ ಚೌಕ್, ಲಕ್ಷ್ಮಿ ಚೌಕ್, ಇಂದಿರಾ ನಗರ ಬಡಾವಣೆ ಮೂಲಕ ಅಲ್ಲಮಪ್ರಭು ಶೂನ್ಯ ಪೀಠ ಅನುಭವ ಮಂಟಪವರೆಗೆ ನಡೆಯಿತು. ಶ್ರೀರಾಮಚಂದ್ರನ ವೇಷಧಾರಿಗಳು ಗಮನ ಸೆಳೆದರು. ಯುವಕರು ತಲೆ ಮೇಲೆ ಕಳಶ ಹೊತ್ತು ಹೆಜ್ಜೆ ಹಾಕುತ್ತ ಪ್ರತಿ ಮನೆಗೆ ಅಕ್ಷತೆ ವಿತರಿಸಿದರು. ಜೈ ಶ್ರೀರಾಮ, ರಾಮ ರಾಷ್ಟ್ರ ಕೀ ಜೈ ಘೋಷಣೆಗಳು ಮೊಳಗಿದವು.
ಸಂಘ ಪರಿವಾರದ ಪ್ರಮುಖ ವಿಶ್ವಜೀತ ಕುರದೆ, ಪ್ರಮುಖರಾದ ಸುಧೀರ ಕಾಡಾದಿ, ಶ್ರೀಮಂತ ಜಾನಬಾ, ಜಗನ್ನಾಥ ದೇಟ್ನೆ, ನಾಗೇಶ ಮೇತ್ರೆ, ಸಂತೋಷ ಗಾಯಕವಾಡ, ಧನರಾಜ ಸೂರ್ಯವಂಶಿ, ಸೋಮನಾಥ ನಂದಗೆ, ಬಸವರಾಜ ಹಾರುಕೂಡೆ, ರೂಪೇಶ ಭೂಮಕರ್, ಪ್ರಭುರಾವ ಭೂಸಾರೆ, ಪ್ರಮೋದ ಸುಲ್ತಾನಪುರೆ, ಗೋವಿಂದ ಹಂದಿಕೆರೆ, ಪ್ರೇಮ ಪಾರಶೆಟ್ಟೆ, ರಾಜಕುಮಾರ ನಿಡೋದೆ, ಶ್ರೀಶೈಲ ಹಾರಕೂಡೆ, ಮಹಾದೇವ ಕೌಟೆ, ಸಚಿನ್ ಬಿರಾದಾರ, ಸಿದ್ದು ಪಾರಶೆಟ್ಟೆ, ಅಂಕುಶ ಭೂಸಾರೆ, ಕಲ್ಯಾಣಿ ದಾನಾ, ಬಸವಕುಮಾರ ಕಾಡಾದಿ, ದಯಾನಂದ ನಿಮಾಣೆ, ಲೋಕೇಶ ಧಬಾಲೆ ಇತರರಿದ್ದರು.