ವಿಜಯಪುರ ವಿವಿಗೆ ಅಕ್ಷರದವ್ವನ ಹೆಸರಿಡಿ

savitri phule jayanti
Published on

ಬೀದರ್: ಭಾರತದ ಮೊದಲ ಮಹಿಳಾ ಶಿಕ್ಷಕಿ, ಮಹಿಳೆಯರ ಶಿಕ್ಷಣಕ್ಕಾಗಿ ಅವಿಸ್ಮರಣೀಯ ಕೊಡುಗೆ ನೀಡಿ ಅಕ್ಷರದವ್ವ ಎಂದೇ ಖ್ಯಾತಿ ಪಡೆದ ಸಾವಿತ್ರಿಬಾಯಿ ಫುಲೆ ಹೆಸರನ್ನು ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಇಡುವಂತೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಆಗ್ರಹಿಸಿದರು.
ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ವಿದ್ಯೆ ನಿರಾಕರಿಸಿದ ಸಮಾಜವನ್ನು ದಿಟ್ಟತನದಿಂದ ಎದುರಿಸಿ ಸದ್ದಿಲ್ಲದ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಫುಲೆ ಆದರ್ಶಪ್ರಾಯರು. ಅನೇಕ ನೋವು, ಅವಮಾನಗಳನ್ನು ಮೆಟ್ಟಿ ನಿಂತು 19ನೇ ಶತಮಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದರು. ಶಾಲೆ ತೆರೆದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದರು.
ರಾಜ್ಯದ ಏಕೈಕ ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಮಾತೆ ಸಾವಿತ್ರಿಬಾಯಿ ಫುಲೆ ಎಂದು ಹೆಸರಿಡಬೇಕು. ಈ ಮುಖಾಂತರ ರಾಜ್ಯದ ವಿದ್ಯಾರ್ಥಿನಿಯರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಸರ್ಕಾರ ಆದ್ಯತೆ ಮೇಲೆ ಈ ಕೆಲಸ ಮಾಡಬೇಕು. ಫುಲೆ ಹೆಸರಿನಲ್ಲಿ ವಸತಿ ಶಾಲೆಗಳನ್ನು ಆರಂಭಿಸಬೇಕು. ಫುಲೆ ಜಯಂತಿ ದಿನವಾದ ಜನವರಿ 3ರಂದು ಹಾಗೂ ಬುದ್ಧ ಪೂರ್ಣಮೆ ದಿನದಂದು ರಾಷ್ಟ್ರೀಯ ರಜೆ ಘೋಷಿಸುವಂತೆ ಒತ್ತಾಯಿಸಿದರು.
ಸಮಿತಿ ಪ್ರಮುಖರಾದ ರಾಜಕುಮಾರ ಬನ್ನೇರ್, ಬಸವರಾಜ ಸಾಗರ, ರಮೇಶ ಮಂದಕನಳ್ಳಿ, ಬಸವರಾಜ ಕಾಂಬಳೆ, ಬಕ್ಕಪ್ಪ ದಂಡಿನ್, ರಂಜಿತಾ ಜೈನೂರ್, ಅಹ್ಮದ್ ಅಲಿಯಾಬಾದ್, ಝರೆಪ್ಪ ರಾಂಪುರೆ, ಸುಧಾಕರ ಮಾಳಗೆ, ವಿದ್ಯಾಸಾಗರ ಬೆಲ್ದಾರ್, ಸಂಜುಕುಮಾರ ಬ್ಯಾಗಿ, ರಾಜಕುಮಾರ ಕಾಳೇಕರ್, ಮಾರುತಿ ಜಗದಾಳೆ, ಘಾಳೆಪ್ಪ ಮಳಚಾಪುರ, ಸೂರ್ಯಕಾಂತ ಸಾದುರೆ, ಗೋಪಾಲ ಸಾಗರ, ನಿತಿನ್ ಹೊಸಮನಿ, ಶಾಹುರಾಜ ಡಾಕುಳಗಿ, ವಿಠಲ ಲಾಡ್ಕರ್, ತುಕಾರಾಮ ಲಾಡ್ಕರ್, ಚಂದ್ರಕಾಂತ ನಿರಾಟೆ, ಸಾಗರ ಮರಖಲಕರ್ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net