ಶಿವಕುಮಾರ ಕಟ್ಟೆಗೆ ಎಚ್.ಎನ್ ಪ್ರಶಸ್ತಿ

katte award
Published on

ಬೀದರ್: ಹಿರಿಯ ಸಾಹಿತಿ, ಕವಿಯಾಗಿರುವ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಮರ್ಷಿಯಲ್ ಪ್ರ್ಯಾಕ್ಟಿಸ್ ವಿಭಾಗದ ಉಪನ್ಯಾಸಕ ಶಿವಕುಮಾರ ಕಟ್ಟೆ ಅವರಿಗೆ ರಾಜ್ಯ ಮಟ್ಟದ ಡಾ.ಎಚ್. ನರಸಿಂಹಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಿಂದ ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಕಟ್ಟೆ ಅವರಿಗೆ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್, ಶಾಸಕ ಮಾನಪ್ಪ ವಜ್ಜಲ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಶಿವಕುಮಾರ ಕಟ್ಟೆ ಮೂರು ದಶಕದಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕವಿ, ಸಾಹಿತಿಯಾಗಿದ್ದು, ಉತ್ತಮ ಬರಹಗಾರರೆನಿಸಿದ್ದಾರೆ. ಗಡಿಯಲ್ಲಿ ಜಿಲ್ಲಾ ಕಲಾವಿದರ ಮತ್ತು ಬರಹಗಾರರ ಸಂಘದಿಂದ ಹಲವಾರು ಕಾರ್ಯ ಮಾಡಿದ್ದಾರೆ. 2007ರಲ್ಲಿ ಜಿಲ್ಲೆಯಲ್ಲಿ ಜರುಗಿದ ಭಾನಾಮತಿ ನಿರ್ಮೂಲನಾ ಆಂದೋಲನ ಸಂಚಾಲಕರಾಗಿ ಜಿಲ್ಲೆಯ 30 ಗ್ರಾಮಗಳಲ್ಲಿ ಸಂಚರಿಸಿ ಉಪನ್ಯಾಸ ನೀಡಿ ಜನಜಾಗೃತಿ ಮೂಡಿಸಿದ್ದಾರೆ. ಇವೆಲ್ಲ ಪರಿಗಣಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಹರ್ಷ: ಎಚ್.ಎನ್.ಪ್ರಶಸ್ತಿ ಕಟ್ಟೆ ಮುಡಿಗೇರಿದ್ದಕ್ಕೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ದೇವಿಪ್ರಸಾದ ಕಲಾಲ್, ಪ್ರಮುಖರಾದ ದಾನಿ ಬಾಬುರಾವ್, ಸುರೇಶ ಚನ್ನಶೆಟ್ಟಿ, ರಫಿ ತಾಳಿಕೋಟಿ, ಸಂತೋಷ ಮಂಗಳೂರೆ, ಪರಮೇಶ್ವರ ಬಿರಾದಾರ, ಸಂಜೀವಕುಮಾರ ಸ್ವಾಮಿ, ಬಸವರಾಜ ಬಲ್ಲೂರ, ಟಿ.ಎಂ. ಮಚ್ಚೆ, ಶಿವಶಂಕರ ಟೋಕರೆ, ಶಂಭುಲಿಂಗ ವಾಲ್ದೊಡ್ಡಿ, ಸಂಜೀವಕುಮಾರ ಅತಿವಾಳೆ ಇತರರು ಹರ್ಷ ವ್ಯಕ್ತಪಡಿಸಿ ಸಾಧಕರಿಗೆ ಸಂದ ಗೌರವ ಇದಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net