ಕೊಳಾರ್ ಶಿವಶಕ್ತಿ ಆಶ್ರಮದಲ್ಲಿ ಜಾತ್ರೆ

Mallayya mutya
Published on

ಬೀದರ್: ಕೊಳಾರ್ (ಕೆ) ಗ್ರಾಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಸ್ಥಾಪಿತ ಶ್ರೀ ಶಿವಶಕ್ತಿ ಲಿಂಗ ಆಶ್ರಮದ 35ನೇ ಜಾತ್ರಾ ಮಹೋತ್ಸವ ಶನಿವಾರ (ಡಿ.30) ಮತ್ತು ಭಾನುವಾರ (ಡಿ.31) ಜರುಗಲಿದೆ.
ಶನಿವಾರ ಸಂಜೆ 7ಕ್ಕೆ ಗ್ರಾಮದ ವೈಜಿನಾಥ ಶಂಭು ಮನೆಯಿಂದ ಆಶ್ರಮದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಭಾನುವಾರ ಬೆಳಗ್ಗೆ ಶಿವಶಕ್ತಿ ಲಿಂಗಕ್ಕೆ ಮಹಾ ಅಭಿಷೇಕ, ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ 7ಕ್ಕೆ ಪೂಜ್ಯರ ದರ್ಶನ ಮತ್ತು ಮಹಾಪ್ರಸಾದ ಇದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಆಶ್ರಮ ಭಕ್ತರು ಕೋರಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net