ಜಾನಪದ ಕಲೆ ಉಳಿಸಿ ಬೆಳೆಸಿ

28hbd5
Published on

ಹುಮನಾಬಾದ್: ಜಾನಪದ ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ತಾಲೂಕಿನ ಹುಡಗಿ ಗ್ರಾಮದ ಶ್ರೀ ಕರಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಜಾನಪದ ಮತ್ತು ಸಂಗೀತ ಕಲಾವಿದರ ಸಂಘದ ವತಿಯಿಂದ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ 13ನೇ ಪುಣ್ಯ ಸ್ಮರಣೊತ್ಸವ ನಿಮಿತ್ತ ಏರ್ಪಡಿಸಿದ ಭಜನೆ ಸ್ಪರ್ಧೆ ಮತ್ತು ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಸೋಡಗಿನ ಜಾನಪದದ ಕಲೆಯಾಗಿರುವ ಭಜನೆ ಕಲೆಯು ಪ್ರಸ್ತುತ ಮರೆಯಾಗುತ್ತಿದೆ. ಈ ಕಲೆಯನ್ನು ಉಳಿಸಬೇಕು ಎಂದು ತಿಳಿಸಿದರು.
ಸ್ಥಳೀಯ ಹಿರೇಮಠ ಸಂಸ್ಥಾನದ ಶ್ರೀ ವಿರೂಪಾಕ್ಷ ಶಿವಾಚಾರ್ಯ, ವಿರಕ್ತ ಮಠದ ಶ್ರೀ ಚನ್ನಮಲ್ಲ ದೇವರ ಸಾನ್ನಿಧ್ಯ ವಹಿಸದ್ದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೋಮನಾಥ ಪಾಟೀಲ್, ಜಾನಪದ ಪರಿಷತ್ ತಾಲೂಕಾಧ್ಯಕ್ಷ ಶರತ್ ನಾರಾಯಣಪೇಟಕರ್, ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಸಂಗಮಕರ್, ಸೋನಮ್ಮಾ, ಕುಂದನಬಾಯಿ, ಮಹಾನಂದಾ, ಗಿರೀಶ್ ತುಂಬಾ, ಮಡಿವಾಳಯ್ಯಾ ಸಾಲಿ, ದಿಲೀಪಕುಮಾರ ದೇಸಾಯಿ, ರಾಜಕುಮಾರ ಹೂಗಾರ ಮದಕಟ್ಟಿ, ದಯಾನಂದ ಸಿಂಧನಕೇರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net