ರಾಷ್ಟ್ರೀಯ ಭಾವೈಕ್ಯತಾ ಮೇಳ

Bharat Seva Dala Photo
Published on

ಬೀದರ್: ಹಿಂದುಸ್ತಾನಿ ಸೇವಾದಳದ ಶತಮಾನತೋತ್ಸವ ಅಂಗವಾಗಿ ಬೀದರ್ ತಾಲ್ಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ನಗರದ ಗಣೇಶ ಮೈದಾನದಲ್ಲಿ ಗುರುವಾರ ಜರುಗಿತು.
ಸೇವಾದಳ ಜಿಲ್ಲಾ ಹಾಗೂ ತಾಲೂಕು ಸಮಿತಿಯು ಕ್ಷೇತ್ರ ಶಿಕ್ಷಣಾಕಾರಿ ಕಚೇರಿ ಸಹಯೋಗದಿಂದ ಕಾರ್ಯಕ್ರಮ ಸಂಘಟಿಸಿತ್ತು. ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯರಾದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ಸೇವಾದಳದ ಸಂಸ್ಥಾಪಕರಾದ ಡಾ. ನಾ.ಸು.ಹರ್ಡೆಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು. ಸೇವಾದಳದ ಸೇವಾಸಾಧನೆ ವಿವರಿಸಿದರು.
ಸೇವಾದಳದ ಹಿರಿಯರಾದ ಭೀಮಸೇನರಾವ ಕಾನಿಹಾಳ ಮಾತನಾಡಿ, ಹಿಂದುಸ್ತಾನಿ ಸೇವಾದಳ ಸ್ವಯಂಸೇವಕರಿಗೆ ಶಿಸ್ತು, ದೇಶ ಪ್ರೇಮ, ತಾಳ್ಮೆ, ಬ್ರಿಟಿಷರ ಗುಂಡಿಗೆ ಎದೆ ಕೊಟ್ಟು ನಿಲ್ಲಲು ಯುವಕರಿಗೆ ತರಬೇತಿ ನೀಡಿದೆ. ಯುವಕರಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನವನ್ನು ಮೂಡಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಲು ಮಹತ್ವದ ಪಾತ್ರ ವಹಿಸಿದೆ ಎಂದರು.
ಜಿಲ್ಲಾ ಸಮಿತಿ ಸದಸ್ಯ ಆದೀಶ್ ವಾಲಿ ಮಾತನಾಡಿದರು. ಸೇವಾದಳ ಬೀದರ್ ತಾಲೂಕು ಅಧ್ಯಕ್ಷ ಸಂಗಶೆಟ್ಟಿ ಹಲಬರ್ಗೆ ಅಧ್ಯಕ್ಷತೆ ವಹಿಸಿದ್ದರು. ಸೇವಾದಳ ಉಪಾಧ್ಯಕ್ಷ ದೀಪಕ ವಾಲಿ, ಪ್ರಮುಖರಾದ ಶಿವಕುಮಾರ ಕಣಗೆ, ಭಾರತಿ ಸೂರ್ಯವಂಶಿ, ದಿಲೀಪ್ ಸೋಲಾಪೂರೆ, ಮಲ್ಲಿಕಾರ್ಜುನ ಡೊಂಗರಗಿ ಇತರರಿದ್ದರು. ಸೇವಾ ದಳದ ಜಿಲ್ಲಾ ಸಂಘಟಕ ಸಿದ್ದಣ್ಣಾ ಯಳಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಜಿಕ್ ಬಂಗಾರೆ ಸ್ವಾಗತಿಸಿದರೆ, ಮಾರುತಿ ಸೂರ್ಯವಂಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net