ಬಿಎಸ್ ವೈ ಬಗ್ಗೆ ಮಾತನಾಡುವ ನೈತಿಕತೆ ಜಾಮದಾರ್ ಗೆ ಇಲ್ಲ

babu wali mugshot new
Published on

ಬೀದರ್: ಮಾಜಿ ಸಿಎಂ, ಹಿರಿಯ ಮುತ್ಸದ್ಧಿ ಬಿ.ಎಸ್.ಯಡಿಯೂರಪ್ಪ ಲಿಂಗಾಯತ ಸಮಾಜದ ಪ್ರಶ್ನಾತೀತ ಮುಖಂಡರು. ಅವರ ವಿರುದ್ಧ ಮಾತನಾಡುವ, ಅವರ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಜಾಮದಾರ್ ಅವರಿಗಿಲ್ಲ ಎಂದು ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ 24ನೇ ಅವೇಶನದಲ್ಲಿ ಕೈಗೊಂಡಿರುವ ಎಂಟು ನಿರ್ಣಯಗಳ ಪೈಕಿ ಲಿಂಗಾಯತರು ಹಿಂದುಗಳಲ್ಲ ಎಂಬ ಕುರಿತಾಗಿ ಯಡಿಯೂರಪ್ಪ ಹಾಗೂ ಅವರ ಪುತ್ರರಾದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಿಲುವು ಜಾಮದಾರ್ ಪ್ರಶ್ನಿಸಿರುವುದು ಖಂಡನೀಯ. ಸಮಾಜಕ್ಕೆ ಜಾಮದಾರ್ ಅವರ ಕೊಡುಗೆ ಶೂನ್ಯ ಇದೆ ಎಂದು ಗುರುವಾರ ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಲಿಂಗಾಯತರು ತಲೆ ಎತ್ತಿ ನಡೆಯುವಂಥ ವಾತಾವರಣ ಕಲ್ಪಿಸಿಕೊಟ್ಟವರು, ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪದ ನಿರ್ಮಾಣಕ್ಕೆ ಅನುದಾನ ಕೊಟ್ಟವರು ಯಡಿಯೂರಪ್ಪ ಎನ್ನುವುದನ್ನು ಜಾಮದಾರ್ ಮರೆಯದಿರಲಿ. ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಬಗ್ಗೆ ಅನಗತ್ಯ ಹೇಳಿಕೆ ಸಹಿಸಲಾಗದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net