

ಬೀದರ್: ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಬಿ.ಎಂ. ಅಮರವಾಡಿ ಅವರನ್ನು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಔರಾದ್‍ನಲ್ಲಿ ಸನ್ಮಾನಿಸಿದರು.
ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಕಾರ್ಯದರ್ಶಿ ರಾಜಕುಮಾರ ಕಂದಗೂಳೆ, ಮುಖಂಡರಾದ ರಾಮಣ್ಣ ಒಡೆಯರ್, ಶಿವರಾಜ ದೇಶಮುಖ, ಅಬ್ದುಲ್ ರಹೀಂ, ನಾಗನಾಥರಾವ್ ದೇವಕತೆ, ಧರ್ಮಾರೆಡ್ಡಿ ಅಲ್ಲಾಪುರ, ಅಮರೇಶ್ವರ ಶೆಟಕಾರ್, ಅನಿಲ್ ಮುಧೋಳ, ಸಂಜುಕುಮಾರ ಸಜ್ಜನ್ ಇದ್ದರು.