ವಿಮಾ ಏಜೆಂಟರ ಹಿತಕ್ಕಾಗಿ ಹೋರಾಟ

vima agent
Published on

ಬೀದರ್: ಜೀವ ವಿಮಾ ಪ್ರತಿನಿಧಿಗಳ ಹಿತ ಕಾಪಾಡಲು ಸಂಘಟನೆ ಅಗತ್ಯ. ನಮ್ಮ ಹಕ್ಕು ಪಡೆಯಲು ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಜೀವ ವಿಮಾ ಏಜೆಂಟರ ಒಕ್ಕೂಟದ ಜಿಲ್ಲಾಧ್ಯಕ್ಷ ಶರಣು ಹಣಮಶೆಟ್ಟೆ ಸೋನಾಳ ಹೇಳಿದ್ದಾರೆ.
ನಗರದಲ್ಲಿ ಜರುಗಿದ ಒಕ್ಕೂಟದ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬರುವ ಒಂದು ವರ್ಷದಲ್ಲಿ ಒಕ್ಕೂಟದಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಬರುವ ಜನವರಿ 24 ರಂದು ಪ್ರತಿನಿಧಿಗಳ ವೃತ್ತಿ ಸಂರಕ್ಷಣಾ ದಿನಾಚರಣೆ ಅದ್ದೂರಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಸಂಘಟನೆ ಬಲಿಷ್ಠ್ಠ ಮಾಡುವುದು ಇಂದಿನ ತೀರ ಅಗತ್ಯವಾಗಿದೆ. ಸಂಘಟನೆಯು ಎಲ್ಲ ಪ್ರತಿನಿಧಿಗಳ ಕಷ್ಟ-ಸುಖದಲ್ಲಿ ಭಾಗಿಯಾಗಿ ಕೆಲಸ ಮಾಡಲಿದೆ. ಹಕ್ಕಿಗಾಗಿ ಹೋರಾಟ ಮಾಡುವ ಜತೆಗೆ ಸಮಾಜ ಸೇವೆಯಲ್ಲೂ ತೊಡಗಲಿದೆ.ಬೀದರ್ ಒಕ್ಕೂಟ ಮಾದರಿ ಮಾಡುವ ಉದ್ದೇಶವಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.
ಸಭೆಯಲ್ಲಿ ಒಕ್ಕೂಟದ ನೂತನ ಪದಾಕಾರಿಗಳ ಆಯ್ಕೆ ಮಾಡಲಾಯಿತು. ಸನ್ಮುಖಯ್ಯ ಸ್ವಾಮಿ(ಗೌರವಾಧ್ಯಕ್ಷ), ದೇವಿಂದ್ರ ಡಿಗ್ಗಿ(ಕೋಶಾಧ್ಯಕ್ಷ), ರೇವಣಸಿದ್ದಪ್ಪ ಬುಳ್ಳಾ(ಪ್ರಧಾನ ಕಾರ್ಯದರ್ಶಿ), ಗಣಪತಿ ರಾಜೇಶ್ವರೆ (ಕಾರ್ಯದರ್ಶಿ), ಶರಣಬಸಪ್ಪ ಪಾಟೀಲ್, ವಿಜಯಕುಮಾರ ಅಣದೂರೆ, ಸವಿತಾ ಸರಡಗಿ, ಅಶೋಕ ಮಂಡೆನವರ್(ಉಪಾಧ್ಯಕ್ಷರು), ವಿ.ಎಂ.ಡಾಕುಳಗಿ(ಪತ್ರಿಕಾ ಪ್ರಕೋಷ್ಠ ಸಲಹೆಗಾರ), ಶಿವಾನಂದ ಸ್ವಾಮಿ, ಉಮೇಶ ಬೆಂಬಳಗಿ( ಗೌರವ ಸಲಹೆಗಾರರು), ಚಂದ್ರಕಾಂತ ಗಾದಗೆ, ರಮೇಶ ಶೆಕೋಬಾ(ಸಂಘಟನಾ ಕಾರ್ಯದರ್ಶಿ), ಹಿರಿಯ ಮಾರ್ಗದರ್ಶಕರಾಗಿ ವೀರಪ್ಪ ಪಸರಗಿ, ಜಿ.ಎಸ್.ಗಂಗಶೆಟ್ಟಿ, ಸೂರ್ಯಕಾಂತ ಹಾಲಹಳ್ಳಿಕರ, ವಿದ್ಯಾವಾನ ಪಾಟೀಲ್, ಧನರಾಜ ಸೊರಳ್ಳಿ, ಪ್ರಭು ಹಾವಶೆಟ್ಟಿ, ಶಾಂತಕುಮಾರ ನಿಣ್ಣಿ, ಕಾಶೀನಾಥ ಹೂಗಾರ್, ಪ್ರಭಾಕರ ಗಂಗಶೆಟ್ಟಿ,ಬಾಬು ಪಸರಗಿ, ವೀರಶೆಟ್ಟಿ ಚಾಂಬುಳೆ, ಸಂಜೀವ ಬಿಡವೆ, ಸಂಗೀತಾ ಸಿಂಧೆ ನೇಮಕಗೊಂಡರು.
ಪ್ರಮುಖರಾದ ಧನರಾಜ ಸ್ವಾಮಿ, ಗಣಪತಿ ಸೋಲಪುರೆ ಇತರರಿದ್ದರು. ಗಣಪತಿ ರಾಜೇಶ್ವರೆ ಸ್ವಾಗತಿಸಿ, ವಂದಿಸಿದರು. ರೇವಣಸಿದ್ಧಪ್ಪ ಬುಳ್ಳಾ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net