

ಹುಮನಾಬಾದ್: ಹಳ್ಳಿಖೇಡ್(ಕೆ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಅಧ್ಯಕ್ಷರಾಗಿ ವಿಶ್ವನಾಥ ಚಿಕ್ಕಪಾಟೀಲ್, ಉಪಾಧ್ಯಕ್ಷರಾಗಿ ಅಂಬಣ್ಣ ಪರೀಟ್ ಮಂಗಳವಾರ ಅವಿರೋಧ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಸ್ಥಳೀಯರಿಂದ ಸನ್ಮಾನ ಸ್ವೀಕರಿಸಿದ ಅಧ್ಯಕ್ಷ ಚಿಕ್ಕಪಾಟೀಲ್ ಮಾತನಾಡಿ, ಸಂಘದ ಅಭಿವೃದ್ಧಿ ಜತೆಗೆ ರೈತರು, ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸಲು ನಾನಾ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಿರ್ದೇಶಕರಾದ ವೀರಣ್ಣ ಪಾಟೀಲ್, ರಾಜಪ್ಪ ಪಾಟೀಲ್, ರೇವಣಸಿದ್ದ ಮೇಲಕೇರಿ, ಮಲ್ಲಿಕಾರ್ಜುನ ಪಾಟೀಲ್, ರೇವಣಸಿದ್ದ ಪಡಶೆಟ್ಟಿ, ಸೂರ್ಯಕಾಂತ ಸದಲಾಪುರೆ, ಮಹಾದೇವಿ ಹಿರೇಮಠ, ಲಕ್ಷ್ಮೀಬಾಯಿ ಮರಾಠ, ಮುಖಂಡರಾದ ಸುಭಾಷ ವಾರದ, ಸುಭಾಷ ಚಿಲಶೆಟ್ಟಿ, ಉದಯ ವಾರದ, ಶಿವಾನಂದ ಚಿಲಶೆಟ್ಟಿ, ಭಕ್ತರಾಜ ಚಿತ್ತಾಪುರೆ, ರಮೇಶ ವಾರದ, ಅಣ್ಣಾರಾವ ರಟಕಲ್, ಪ್ರಭುರಾವ ಬಿರಾದಾರ, ಗುಂಡಪ್ಪ ಕೋರಿ, ನಾಗಣ್ಣ ಚಿಕ್ಕಪಾಟೀಲ್, ಮಹಾದೇವ ಗಿರಿ ಇತರರಿದ್ದರು.