ಹೆಚ್ಚುವರಿ ಎಸ್ಪಿಯಾಗಿ ಕಾರ್ಯಭಾರ ಸ್ವೀಕಾರ

asp
Published on

ಬೀದರ್: ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ ಪೂಜಾರಿ ಮಂಗಳವಾರ ಕಾರ್ಯಭಾರ ವಹಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಿಗೆ ಇಬ್ಬರು ಹೆಚ್ಚುವರಿ ಎಸ್ಪಿ ನೇಮಿಸಲು ನಿರ್ಧರಿಸಿದೆ. ಇದರನ್ವಯ ರಾಜ್ಯ ಗುಪ್ತ ವಾರ್ತೆ ಡಿವೈಎಸ್ಪಿಯಿಂದ ಬಡ್ತಿ ಹೊಂದಿದ ಪೂಜಾರಿ ಅವರನ್ನು ಬೀದರ್ ಜಿಲ್ಲೆ ಹೆಚ್ಚುವರಿ ಎಸ್ಪಿ-2 ಎಂದು ನೇಮಿಸಿ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು.
ಚಂದ್ರಕಾಂತ ಪೂಜಾರಿ ಈ ಹಿಂದೆ ದೀರ್ಘಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಅನುಭವಿ ಪೊಲೀಸ್ ಅಧಿಕಾರಿ. ಸರ್ಕಾರದ ನಿರ್ಧಾರದಂತೆ ಎರಡನೇ ಹೆಚ್ಚುವರಿ ಎಸ್ಪಿಯಾಗಿ ಕಾರ್ಯನಿರ್ವಹಿಸಲು ಆಗಮಿಸಿದ ಮೊದಲ ಅಧಿಕಾರಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮಹೇಶ ಮೇಘಣ್ಣನವರ್ ಸಹ ಜಿಲ್ಲಾ ಹೆಚ್ಚುವರಿ ಎಸ್ಪಿ ಆಗಿದ್ದಾರೆ.
ವಿಜಯಪುರ ಮೂಲದ ಪೂಜಾರಿ 1994ರಲ್ಲಿ ಪಿಎಸ್ಐ ಆಗಿ ಪೊಲೀಸ್ ಇಲಾಖೆ ಸೇರಿದರು. ವಿವಿಧೆಡೆ ಪಿಎಸ್ಐ, ಇನ್ಸ್ ಪೆಕ್ಟರ್, ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಪಿಎಸ್ಐನಿಂದ ಹಿಡಿದು ಡಿವೈಎಸ್ಪಿವರೆಗೆ ಪೂಜಾರಿ ದಶಕಕ್ಕೂ ಹೆಚ್ಚು ಬೀದರ್ ಜಿಲ್ಲೆಯಲ್ಲೇ ಕೆಲಸ ಮಾಡಿದ್ದಾರೆ. ಇಲ್ಲಿ ಎರಡ್ಮೂರು ಸಲ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವಂಥ ಘಟನೆ, ಕೋಮು ಜಗಳದಂಥ ಸ್ಥಿತಿ ಎದುರಾದಾಗ ಪೂಜಾರಿ ಕಾನೂನು ಸುವ್ಯವಸ್ಥೆ ಕಾಪಾಡಿ ಶಾಂತಿ ಮೂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net