ತುಂತುರು ನೀರಾವರಿ ಅಳವಡಿಸಿಕೊಳ್ಳಿ

Narayanpur
Published on

ಔರಾದ್: ಕಡಿಮೆ ನೀರಾವರಿ ಸೌಲಭ್ಯ ಇರುವ ಭೂಮಿಯಲ್ಲಿ ಆಧುನಿಕ ಪದ್ಧತಿಯಲ್ಲಿ ತುಂತುರು ನೀರಾವರಿ ಪೈಪ್ಗಳನ್ನು ಅಳವಡಿಸಿ ಉತ್ತಮ ಬೆಳೆ ತೆಗೆಯಬಹುದು ಎಂದು ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಗೌಡ ಹೇಳಿದರು.
ರಿಲಯನ್ಸ್ ಫೌಂಡೇಷನ್ ಹಾಗೂ ಔಟ್ ರೀಚ್ ಸಂಸ್ಥೆ ಸಹಯೋಗದಡಿ ನಾರಾಯಣಪುರದಲ್ಲಿ ಏರ್ಪಡಿಸಿದ್ದ ರೈತರಿಗೆ ತುಂತುರು ನೀರಾವರಿ ಪೈಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸುಧಾರಿತ ಮತ್ತು ಆಧುನಿಕ ಪದ್ಧತಿ ಕೃಷಿ ಕೈಗೊಳ್ಳಲು ಫೌಂಡೇಷನ್ ರೈತರಿಗೆ ನೆರವಾಗುತ್ತಿದೆ. ತುಂತುರು ನೀರಾವರಿಯಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಹೊಸ ರೀತಿಯ ಪೈಪ್ಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಪ್ರಮುಖರಾದ ಕಲ್ಲಪ್ಪ ಹುಗ್ಗೆ, ಶಿವಕುಮಾರ, ಅರವಿಂದ, ಸೈಯದ್ ಅನ್ಸಾರಿ ಮುರ್ತುಜಾ, ಮಲ್ಲಿಕಾರ್ಜುನ ವಡಮೂರ್ಗೆ, ಮುಕ್ತಾಬಾಯಿ, ಸುರೇಖಾ ಚಿದ್ರೆ, ರಂಜನಾ, ರಾಜಶ್ರೀ, ಜ್ಯೋತಿ, ಪ್ರೀತಿ, ಸೌಮ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net