ಒಬ್ಬ ಸಾವು ಏಳು ಜನ ಗಾಯ

Karu dikki
Published on

ಔರಾದ್: ಧೂಪತಮಹಗಾಂವ-ಮುಸ್ತಾಪುರ ಮಾರ್ಗದ ಕೆರೆ ಹತ್ತಿರ ಸೋಮವಾರ ಕಾರು ಮತ್ತು ಆಟೋ ಪರಸ್ಪರ ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಜನ ಗಂಭೀರ ಗಾಯಗೊಂಡಿದ್ದಾರೆ.
ಧೂಪತಮಹಗಾಂವದ ಬಳವಂತರಾವ(ಬಳಿರಾಮ) ಗಾಯಕವಾಡ(54) ಮೃತರು. ಆಟೋದಲ್ಲಿದ್ದ ಧೂಪತಮಹಗಾಂವನ ಜಗದೇವಿ ಬೀರಪ್ಪ, ಗೀತಾ ಪಾಟೀಲ್, ಪರಗಬಾಯಿ ಕಾಶೆಪ್ಪ, ನರಸಿಂಗ ನಾಗಪ್ಪ, ಕುತಮಾಪುರದ ಲಕ್ಷ್ಮೀಬಾಯಿ ಇಂಗಳೆ ಸೇರಿ ಏಳು ಜನ ಗಾಯಗೊಂಡಿದ್ದಾರೆ. ಕೆಲವರ ಕೈ-ಕಾಲು ಮುರಿದಿದ್ದು, ಬೀದರ್ ಬ್ರಿಮ್ಸ್ಗೆ ರವಾನಿಸಲಾಗಿದೆ.
ವಡಗಾಂವ(ದೇ) ಗ್ರಾಮದ ಮಲ್ಲಿಕಾರ್ಜುನ ಭುಶೆಟ್ಟೆ ಕಾರಿನಲ್ಲಿ ಧೂಪತಮಹಗಾಂವದಿಂದ ಮಗಳಿಗೆ ಕರೆದುಕೊಂಡು ಮುಸ್ತಾಪುರ ಕಡೆ ಬರುತ್ತಿರುವಾಗ ಸಾರ್ವಜನಿಕರನ್ನು ತುಂಬಿಕೊಂಡು ಬರುತ್ತಿದ್ದ ಆಟೋ ಮಧ್ಯೆ ಡಿಕ್ಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಜೊನ್ನಿಕೇರೆ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ. ಪಿಎಸ್ಐ ಮಹಿಬೂಬ್ ಅಲಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net