

ಬಸವಕಲ್ಯಾಣ: ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜತೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದು ಸಿಪಿಐ ಅಲಿಸಾಬ್ ಕಿವಿಮಾತು ಹೇಳಿದರು.
ನಗರದ ಜ್ಞಾನಪ್ರಿಯ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಜ್ಞಾನವಂತರಾಗಲು ಶ್ರಮವಹಿಸಿ ಓದಬೇಕು. ಉತ್ತಮ ಆರೋಗ್ಯಕ್ಕಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದರು.
ಮುಖಂಡ ಅರ್ಜುನ ಕನಕ ಮಾತನಾಡಿ, ಜ್ಞಾನಪ್ರಿಯ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಜತೆಗೆ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಫಾದರ್ ಅನೀಲ ಕ್ರಾಸ್ತಾ, ಫಾದರ್ ಜಾಜ್೯ ಲೋಬೊ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಜಡಗೆ, ಮುಖ್ಯಗುರು ಸಿಸ್ಟರ್ ಮರಿಯಾ ಮಿನೇಜಸ್, ಸಿಆರ್ ಪಿ ಗಿರಿಧರ ಧಾನೂರೆ, ಅರ್ಜುನ ಕನಕ, ನಾಸೀರ್ ಪಟೇಲ್ ಇತರರಿದ್ದರು. ಸಿಸ್ಟರ್ ಬೆಟ್ಟಿ ಲೋಬೊ ಸ್ವಾಗತಿಸಿದರು. ಸವಿತಾ ಬೇಲೂರೆ ನಿರೂಪಣೆ ಮಾಡಿದರು. ಶ್ವೇತಾ ಅಲಶೆಟ್ಟಿ ವಂದಿಸಿದರು.
ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮತ್ತು ಇತರ ಸಾಧಕರನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.