

ಔರಾದ್: ಸತ್ಸಂಗದಿಂದ ಬದುಕು ಸಾಗಿಸಬೇಕು. ಸಂತರ ವಾಣಿಯನ್ನು ನಿತ್ಯ ಆಲಿಸಬೇಕು ಎಂದು ಮಲಯ್ಯ ಗಿರಿಯ ಪೀಠಾಧಿಪತಿ ಶ್ರೀ ಡಾ.ಬಸವಲಿಂಗ ಅವಧೂತರು ಹೇಳಿದರು.
ಚಂದ್ರಮಹಾರಾಜ್ ತಾಂಡಾದಲ್ಲಿ ಏರ್ಪಡಿಸಿದ್ದ ಶ್ರೀ ಹನುಮಾನ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಧ್ಯಾನ, ಯೋಗ ಮತ್ತು ಭಜನೆಯಿಂದ ಜನ್ಮ ಪಾವನವಾಗುತ್ತದೆ ಎಂದರು.
ಪ್ರತಿಯೊಬ್ಬರೂ ಸಂಸ್ಕಾರ ಅಳವಡಿಸಿಕೊಂಡು ಜೀವನ ಸಾಗಿಸಬೇಕು. ದುಶ್ಚಟಗಳಿಂದ ದೂರವಿರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಜತೆ ಸಂಸ್ಕಾರ ನೀಡಬೇಕು. ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ್, ಪೂಜ್ಯ ಪೌರದೇವಿ ಬಾಬುಸಿಂಗ್ ಮಹಾರಾಜ್, ಶ್ರೀ ಶಿವಲಿಂಗ ಶಿವಾಚಾರ್ಯ ಹೆಡಗಾಪುರ, ಸಂಗ್ರಾಮ ಮಹಾರಾಜ್, ದೇವಿದಾಸ ಮಹಾರಾಜ್, ದಾಮು ಮಹಾರಾಜ್, ಶಾಸಕ ಪ್ರಭು ಚವ್ಹಾಣ್, ಪ್ರಮುಖರಾದ ಶ್ರೀಮಂತ ಪಾಟೀಲ್, ರಮೇಶ ಕೇಶವ, ಮಹಾದೇವ ಮಹಾರಾಜ್, ಕಿಶನ್ ಪವಾರ್, ಸುನೀಲ, ಗೋವಿಂದ, ನಾಮದೇವ ಇತರರಿದ್ದರು.