

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಅವರು ಭಕ್ತರಿಗೆ ಕಬ್ಬಿನ ಹಾಲು ವಿತರಿಸಿ ಆಶೀರ್ವದಿಸಿದರು.
ನೌಬಾದ್ ಬಳಿಯ ಭಾಲ್ಕಿ ರಿಂಗ್ರೋಡ್ ಹತ್ತಿರ ಒಂದು ಲಾರಿಯಲ್ಲಿ ಕಬ್ಬು ತರಲಾಗಿತ್ತು. ಯಂತ್ರದ ಮೂಲಕ ಹಾಲು ಮಾಡಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ 12 ಸಾವಿರಕ್ಕೂ ಅಧಿಕ ಭಕ್ತರಿಗೆ ನೀಡಿದರು. ಪೂಜ್ಯರು ಒಂದು ತಿಂಗಳಿಂದ ಕಲಬುರಗಿ, ಬೀದರ್ ಸೇರಿ ಮಹಾರಾಷ್ಟ್ರದಲ್ಲಿ ಹಾಲು ವಿತರಣೆ ಮಾಡಿದ್ದಾರೆ.
ಸಮಿತಿ ಭಾಲ್ಕಿ ತಾಲೂಕು ಅಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ, ಶಿವಕುಮಾರ ಮದನೂರ, ದಿಲೀಪ ಪಾಟೀಲ್, ವಿಶ್ವ ಕೊಳಾರ್, ಮಾಣಿಕ, ನಾಗಶೆಟ್ಟಿ, ಅರ್ಜುನ ಸಿಂಧೆ, ಅಭಿಷೇಕ, ಉಮೇಶ, ಗುರುನಾಥ, ದಯಾನಂದ ಸ್ವಾಮಿ, ಚಂದ್ರಕಾಂತ, ಅರುಣ, ಮೋಹನ, ವಿಶ್ವ ಕೊಳಾರ್, ಮಲ್ಲು ಕೊಳಾರ್, ರಿಷಿ, ಪ್ರಶಾಂತ ಇತರರಿದ್ದರು.